ಶ್ರೀಲಂಕಾದಿಂದ ಭಾರತೀಯ ಕಾರ್ಮಿಕರು ಇಂದು ವಾಪಸ್

ಶ್ರೀಲಂಕಾದ ಉಕ್ಕಿನ ಕಾರ್ಖಾನೆಯೊಂದರಲ್ಲಿ ಅಕ್ರಮವಾಗಿ ಬಂಧನವಾಗಿದ್ದ ಭಾರತೀಯ ಕಾರ್ಮೀಕರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೊ: ಶ್ರೀಲಂಕಾದ ಉಕ್ಕಿನ ಕಾರ್ಖಾನೆಯೊಂದರಲ್ಲಿ ಅಕ್ರಮವಾಗಿ ಬಂಧನವಾಗಿದ್ದ ಭಾರತೀಯ ಕಾರ್ಮೀಕರು ಮಂಗಳವಾರ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭುವಲ್ಕಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಶದಲ್ಲಿದ್ದ ಭಾರತೀಯ ಕಾರ್ಮಿಕರನ್ನು ಮಂಗಳವಾರ ಬಿಡುಗಡೆ ಮಾಡಲಿದ್ದು, ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ಭಾರತದ ಉನ್ನತ ಆಯೋಗದ ವಕ್ತಾರ ತಿಳಿಸಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರನ್ನು ಭುವಲ್ಕಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಕ್ರಮವಾಗಿ ವಶದಲ್ಲಿಟ್ಟಕೊಂಡಿತ್ತು. ಭಾರತೀಯ ಕಾರ್ಮಿಕರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಯಿಂದ ಶ್ರೀಲಂಕಾ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು.

ಈಗಾಗಲೇ ಕೆಲ ಕಾರ್ಮಿಕರು ವಿಮಾನದಲ್ಲಿ ಬರುತ್ತಿದ್ದು, ಇನ್ನುಳಿದ ಕಾರ್ಮಿಕರು ಇಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೂಲಿ ಕೆಲಸಕ್ಕಾಗಿ ಈ ಕಾರ್ಮಿಕರು ಕಳೆದ ಜೂನ್‌ನಲ್ಲಿ ಶ್ರೀಲಂಕಾಗೆ ತೆರಳಿ ಅಲ್ಲಿನ ಭುಕ್ವಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವೇತನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಮತ್ತು ಕಾರ್ಮಿಕರ ನಡುವೆ ಸಂಘರ್ಷವಾಯಿತು. ಈ ಸಂದರ್ಭದಲ್ಲಿ ಭಾರತೀಯ ಕಾರ್ಮಿಕರನ್ನು ಬಂಧಿಸಲಾಗಿತ್ತು.

ಆದರೆ, ಈ ಆರೋಪವನ್ನು ತಳ್ಳಿ ಹಾಕಿದ್ದ ಶ್ರೀಲಂಕಾ ಕಾರ್ಮಿಕರನ್ನು ಬಂಧಿಸಿಲ್ಲ ಎಂದು ಹೇಳಿತ್ತು. 77 ಜನರಲ್ಲಿ 49 ಜನ ಬಿಹಾರದವರಾಗಿದ್ದು, ಉಳಿದವರು ದೇಶದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com