
ಪ್ಯಾರಿಸ್: ಕಳೆದ ಬುಧವಾರ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿ 12 ಮಂದಿ ಹತ್ಯೆ ಮಾಡಿದ್ದ ಇಬ್ಬರು ಉಗ್ರರ ಪತ್ತೆಗಾಗಿ ಫ್ರೆಂಚ್ ಸೇನೆ ಕಾರ್ಯಾಚರಣೆ ತೀವ್ರಗೊಳಿಸಿದೆ.
ಪರಾರಿಯಾಗಲು ಯತ್ನಿಸುತ್ತಿದ್ದ ಭಯೋತ್ಪಾದಕರನ್ನು ಬೆನ್ನಟ್ಟಿದ ಫ್ರೆಂಚ್ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಹಾಗೂ ಫ್ರೆಂಚ್ ಗುಂಡಿನ ಚಕಮಕಿ ನಡೆದಿದೆ. ಈಶಾನ್ಯ ಪ್ಯಾರಿಸ್‌ನಲ್ಲಿ ಉಗ್ರರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಉಗ್ರರು ಪರಾರಿಯಾಗಲು ಬಳಸುತ್ತಿದ್ದ ಕಾರನ್ನು ಯೋಧರು ವಶಕ್ಕೆ ಪಡೆದಿದ್ದಾರೆ.
ಈಶ್ಯಾನ ಪ್ಯಾರಿಸ್‌ನಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದ ಉಗ್ರರು ಮತ್ತೊಂದು ಕಾರನ್ನು ಅಪಹರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕಾರನ್ನು ಅಪಹರಿಸಿರುವ ಉಗ್ರರು ಆ ಕಾರಿನಲ್ಲಿದ್ದ ಇಬ್ಬರನ್ನು ತಮ್ಮ ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಾರನ್ನು ಬಿಟ್ಟು ಪರಾರಿಯಾಗಿರುವ ಇಬ್ಬರು ಉಗ್ರರ ಬಂಧನಕ್ಕಾಗಿ ಫ್ರೆಂಚ್ ಸೇನೆ ಪಣತಟ್ಟಿದೆ. ಉಗ್ರರ ಪತ್ತೆಗಾಗಿ ಸೇನೆ ಹೆಲಿಕಾಫ್ಟರ್ ಬಳಸಿಕೊಳ್ಳುತ್ತಿದೆ. ಪ್ಯಾರಿಸ್‌ನಲ್ಲಿ ಮಳೆಯಾಗುತ್ತಿರುವುದರಿಂದ ಮೋಡ ಕವಿದ ವಾತಾವರಣ ಸೃಷ್ಠಿಯಾಗಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣ ರಾತ್ರಿ ವೇಳೆ ಕಾರ್ಯನಿರ್ವಹಿಸುವ ಕ್ಯಾಮರವನ್ನು ಹೆಲಿಕಾಫ್ಟರ್‌ಗೆ ಅಳವಡಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸುಮಾರು 80 ಸಾವಿರ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ. ಶತಾಯಗತಾಯ ಉಗ್ರರರನ್ನು ಬಂಧಿಸುವ ವಿಶ್ವಾಸವನ್ನು ಸೇನೆ ವ್ಯಕ್ತಪಡಿಸಿದೆ.
Advertisement