ಇನ್ನೂ ಪತ್ತೆಯಾಗಿಲ್ಲ ಏರ್‌ಏಷ್ಯಾ ಬ್ಲಾಕ್‌ಬಾಕ್ಸ್
ಜಕಾರ್ತ: ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನದ ಬಾಲವನ್ನು ಶನಿವಾರ ಬಲೂನ್ ಸಹಾಯದಿಂದ ಮೇಲೆತ್ತಲಾಗಿದ್ದು, ಬ್ಲಾಕ್ ಬಾಕ್ಸ್ ಮಾತ್ರ ಪತ್ತೆಯಾಗಿಲ್ಲ.
ಆದರೆ, ಈಗ ಪತ್ತೆಯಾಗಿರುವ ಬಾಲದಲ್ಲಿ ಬ್ಲಾಕ್‌ಬಾಕ್ಸ್ ಇರದ ಕಾರಣ, ಸಮುದ್ರಕ್ಕೆ ವಿಮಾನ ಬೀಳುವ ಮೊದಲೇ ಬ್ಲಾಕ್‌ಬಾಕ್ಸ್ ಬೇರ್ಪಟ್ಟಿದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಸಮುದ್ರದ 100 ಅಡಿ ಆಳದಲ್ಲಿ ಪತ್ತೆಯಾದ ಬಾಲವನ್ನು ವಿಮಾನ ಮತ್ತು ಕ್ರೇನ್ ಮೂಲಕ ಮೇಲೆತ್ತಲಾಯಿತು.
ಶುಕ್ರವಾರವಷ್ಟೆ ಸಮುದ್ರದೊಳಗೆ ಬ್ಲಾಕ್‌ಬಾಕ್ಸ್ ಶೋಧಿಸುವಾಗ ತರಂಗಗಳು ಪತ್ತೆಯಾಗಿತ್ತು. ಈ ಕಾರಣದಿಂದ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿತ್ತು. ಆದರೆ, ಈಗ ತರಂಗಗಳು ಈ ಯಾವ ಮಾರ್ಗದಿಂದ ಬಂದಿದೆ ಎಂಬ ಬಗ್ಗೆ ಮತ್ತೆ ಶೋಧ ಮುಂದುವರಿದಿದೆ ಎಂದು ಸಾರಿಗೆ ಸುರಕ್ಷಾ ತನಿಖಾಧಿಕಾರಿ ಹೇಳಿದ್ದಾರೆ.
ಆದರೆ, ಬ್ಲಾಕ್‌ಬಾಕ್ಸ್ ಇರುವ ಬಗ್ಗೆ ಇನ್ನೂ ತರಂಗಗಳು ಪತ್ತೆಯಾಗುತ್ತಿದ್ದು, ಈಗ ಶೋಧಿತ ಪ್ರದೇಶದ ಸಮೀಪದಲ್ಲೇ ಎಲ್ಲೋ ಬೆಂಕಿಗಾಹುತಿಯಾಗಿರಬೇಕು ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ