
ವಾಷಿಂಗ್ಟನ್: ಬರ ನಿರ್ವಹಣೆ ಮತ್ತು ಪ್ರವಾಹದ ಕುರಿತು ಎಚ್ಚರಿಕೆ ನೀಡಲು ನಾಸಾ ಹೊಸ ಉಪಗ್ರಹವೊಂದನ್ನು ಇದೇ ಜನವರಿಯಲ್ಲಿ ಉಡಾವಣೆ ಮಾಡಲಿದೆ.
ಮಣ್ಣಿನ ತೇವಾಂಶದಲ್ಲಿನ ಏರಿಳಿತವನ್ನು ಪತ್ತೆ ಹಚ್ಚುವ ಉಪಗ್ರಹ (ಎಸ್‌ಎಂಎಪಿ)ವು ಒಂದು ಧ್ರುವದಿಂದ ಇನ್ನೊಂದು ಧ್ರುವದಲ್ಲಿ ಭೂಮಿಯ ತೇವಾಂಶ ಹೇಗೆ ಬದಲಾಗುತ್ತದೆ ಎನ್ನುವ ಕುರಿತು ಸಮಗ್ರ ಮಾಹಿತಿ ನೀಡಲಿದೆ.
ಬರದ ಸ್ವರೂಪ ಹೇಗೆ ಪ್ರಾರಂಭವಾಗುತ್ತದೆ ಹಾಗೂ ಮುಗಿಯುತ್ತದೆ. ಜತೆಗೆ ಉಳಿದ ಪ್ರದೇಶಗಳಿಗೆ ಹೇಗೆ ವಿಸ್ತರಣೆಯಾಗುತ್ತದೆ ಎಂಬ ಬಗ್ಗೆ ಕೂಲಂಕುಷವಾಗಿ ವಿಜ್ಞಾನಿಗಳು ಇದರ ಸಹಾಯದಿಂದ ಅರಿಯಲಿದ್ದಾರೆ. ಇದರಿಂದ ಮಳೆ ನಂಬಿಕೊಂಡು ಕೃಷಿ ಮಾಡುವ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರ.
ಇದಲ್ಲದೆ ಪ್ರವಾಹ ಬರುವ ಮುನ್ಸೂಚನೆಯನ್ನೂ ಮಣ್ಣಿನ ತೇವಾಂಶದ ಸ್ಥಿತಿಗತಿ ಮೇಲೆ ಅರಿಯಬಹುದಾಗಿದೆ. ಚಂಡಮಾರುತ ಬರುವ ಮುನ್ಸೂಚನೆಯ್ನೂ ಇದರಿಂದ ಪಡೆಯಬಹುದಾಗಿದೆ. ಭೂಮಿಯ ಟಾಪ್ 5 ಸೆ.ಮೀ. ಮಣ್ಣಿನ ತೇವಾಂಶ ಹಂತದ ದಾಖಲೆಯನ್ನು ಪ್ರತಿ ಮೂರು ದಿನಗಳಿಗೊಮ್ಮೆ ಈ ಸೆಟಲೈಟ್ ರವಾನಿಸಲಿದೆ.
Advertisement