
ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.42 ಮತ್ತು ಡೀಸೆಲ್ ದರದಲ್ಲಿ 2.25 ರುಪಾಯಿ ಇಳಿಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ತೀವ್ರ ಇಳಿಕೆಯಾದ ಹಿನ್ನಲೆಯಲ್ಲಿ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ ಇಳಿಕೆ ಮಾಡಿವೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ದಿನೇ ದಿನೇ ಇಳಿಕೆಯತ್ತ ಸಾಗುತ್ತಿದ್ದು, ಪ್ರತೀ ಬ್ಯಾರೆಲ್ ದರ 45 ಡಾಲರ್‌ಗಳಿಗಿಂತಲೂ ಕಡಿಮೆಯಾಗಿತ್ತು.
ಇನ್ನು ಕಳೆದ ಜೂನ್ ತಿಂಗಳಿನಿಂದಲೂ ಕಚ್ಛಾ ತೈಲದ ದರ ಇಳಿಕೆಯತ್ತ ಮುಖ ಮಾಡಿದ್ದು, ವಿಶ್ವದ ನಾನಾ ದೇಶಗಳು ತಾವಾಗಿಯೇ ಕಚ್ಛಾತೈಲ ಉತ್ಪಾದನೆಯಲ್ಲಿ ತೊಡಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗಿಂತಲೂ ಉತ್ಪಾದನೆ ಹೆಚ್ಚಾಗ ತೊಡಗಿದೆ. ಹೀಗಾಗಿಯೇ ಕಚ್ಛಾ ತೈಲ ದರ ಇಳಿಕೆಯತ್ತ ಮುಖ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement