ಜೆಲ್ಲಿಕಟ್ಟು ಸ್ಪರ್ಧೆ ಪಾಶ್ಚಿಮಾತ್ಯ ಸಂಸ್ಕೃತಿ: ಮನೇಕಾ ಗಾಂಧಿ

ಜಾನುವಾರುಗಳು ಸೇರಿದಂತೆ ಎಲ್ಲಾ ಜೀವಿಗಳಿಗೂ ಶಾಂತಿ, ನೆಮ್ಮದಿಯಿಂದ ಬದುಕುವ ಜನ್ಮಜಾತ ಹಕ್ಕು...
ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ
ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ

ಪಿಲಿಭಿಟ್: ಜಾನುವಾರುಗಳು ಸೇರಿದಂತೆ ಎಲ್ಲಾ ಜೀವಿಗಳಿಗೂ ಶಾಂತಿ, ನೆಮ್ಮದಿಯಿಂದ ಬದುಕುವ ಜನ್ಮಜಾತ ಹಕ್ಕು ಇದೆ ಎಂದು ಹೇಳಿ, ಜೆಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧಿಸಿದ್ದ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಸ್ವಾಗತಿಸಿದ್ದಾರೆ.

ಇಂದು ಪಿಲ್‌ಭಿಟ್‌ನಲ್ಲಿ ಮಾತನಾಡಿರುವ ಮೇನಕಾ ಗಾಂಧಿ, ಜೆಲ್ಲಿಕಟ್ಟು ಸಂಪ್ರದಾಯವು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ. ಎತ್ತು ಹಾಗೂ ಧನಗಳು ಕೃಷಿಯೇತರ ರೈತರಿಗೆ ಉಪಯೋಗವಂತಹ ಪ್ರಾಣಿಗಳು. ಇಂತಹ ಪ್ರಾಣಿಗಳನ್ನು ಹಿಂಸಿಸಿ ಸ್ಪರ್ಧೆಗಳಿಗೆ ಉಪಯೋಗಿಸುವ ಮೂಲಕ ಅವುಗಳು ಸಾವನ್ನಪ್ಪುವಂತೆ ಮಾಡುವುದು ಸರಿಯಲ್ಲ. ಇಂತಹ ಸ್ಪರ್ಧೆಗಳು ಪ್ರಾಣಿಗಳೊಂದಿಗೆ ಮನುಷ್ಯರನ್ನು ಕೊಲ್ಲಲ್ಪಡುತ್ತಿದೆ ಎಂದು ಹೇಳಿದ್ದಾರೆ.

ಭೂಮಿ, ಬೆಳೆದ ಧಾನ್ಯ ಪೂಜೆಗಳನ್ನು ಮಾಡುವುದು ಮಕರ ಸಂಕ್ರಾಂತಿ ಹಬ್ಬದ ವಿಶೇಷತೆ ಆದರೆ ತಮಿಳುನಾಡಿನಲ್ಲಿ ಈ ಹಬ್ಬದ ವಿಶೇಷತೆ ತದ್ವಿರುದ್ಧವಾಗಿದ್ದು ಪ್ರಾಣಿಗಳ ಮೇಲೆ ದೌರ್ಜನ್ಯವೆಸಗುವಂತಹ ಸ್ಪರ್ಧೆಗಳನ್ನು ಆಚರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಘನತೆ, ಗೌರವದಿಂದ ಬದುಕುವ ಹಕ್ಕು ಪ್ರಾಣಿಗಳಿಗೂ ಇದೆ. ಜೆಲ್ಲಿಕಟ್ಟುಗಳಂತ ಸ್ಪರ್ಧೆಗಳಿಂದ ಗೂಳಿಗಳಿಗೆ ಮತ್ತು ಎತ್ತುಗಳಿಗೆ ಭಾರಿ ದೈಹಿಕ ಶ್ರಮದ ಜತೆಗೆ ಹಿಂಸೆಯಾಗುತ್ತಿದ್ದು, ಪ್ರಾಣಿ ಹಿಂಸೆ ಕಾನೂನಿಗೆ ವಿರುದ್ಧವಾಗಿದ್ದು, ಇಂತಹ ಸ್ಪರ್ಧೆಗಳು ಪ್ರಾಣಿಗಳ ಕಾನೂನು ಬದ್ಧ ಹಕ್ಕಿಗೆ ಚ್ಯುತಿ ತಂದಂತಾಗುತ್ತಿದೆ ಎಂದು ಹೇಳಿದ್ದ ಸುಪ್ರೀಂಕೋರ್ಟ್ ಕಳೆದ ವರ್ಷ ದೇಶದಾದ್ಯಂತ ಜೆಲ್ಲಿಕಟ್ಟು ಸ್ಪರ್ಧೆಗೆ ನಿಷೇಧ ಹೇರಿತ್ತು.

ಸುಪ್ರೀಂಕೋರ್ಟ್‌ನ ನಿರ್ಧಾರದಿಂದಾಗಿ ತಮಿಳುನಾಡಿನಾದ್ಯಂತ ವಿರೋಧವ್ಯಕ್ತವಾಗಿದ್ದು, ಹಲವೆಡೆ ಕಾಯ್ದೆಯನ್ನು ರದ್ದು ಪಡಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ.

ಒಂದೆಡೆ ಸುಪ್ರೀಂಕೋರ್ಟ್ ಜೆಲ್ಲಿಕಟ್ಟು ಸ್ಪರ್ಧೆಗಳಿಗೆ ನಿಷೇಧವೇರಿ ಪ್ರಾಣಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದರೆ ಮತ್ತೊಂದೆಡೆ ಜೆಲ್ಲಿಕಟ್ಟು ಹಬ್ಬಕ್ಕೆ ಧನಗಳ ಜಾತ್ರೆ ಎಂಬ ಮತ್ತೊಂದು ಹೆಸರನ್ನು ನೀಡಿ ಜೆಲ್ಲಿಕಲ್ಲು ಸ್ಪರ್ಧೆಯಂತೆಯೇ ಧನಗಳ ಓಟ ಎಂಬ ಸ್ಪರ್ಧೆಯನ್ನು ಪುತ್ತೂರಿನಲ್ಲಿ ಆಚರಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com