ಪ್ರಾಣಕ್ಕೆ ಕುತ್ತಾದ ವಿಡಿಯೋ ಗೇಮ್

ತೈವಾನ್ ನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ವಿಡಿಯೋ ಗೇಮ್ ಆಡುವ ಮೂಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕಂಪ್ಯೂಟರ್ ವಿಡಿಯೋ ಗೇಮ್ (ಸಂಗ್ರಹ ಚಿತ್ರ)
ಕಂಪ್ಯೂಟರ್ ವಿಡಿಯೋ ಗೇಮ್ (ಸಂಗ್ರಹ ಚಿತ್ರ)

ತೈಪೆ: ತೈವಾನ್ ನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ವಿಡಿಯೋ ಗೇಮ್ ಆಡುವ ಮೂಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತೈವಾನ್ ನ ಕೋಹ್‌ಸಿಯಂಗ್ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಹ್ಸೀ ಎಂದು ಗುರುತಿಸಲಾಗಿದೆ. ನಗರದ ಪ್ರಮುಖ ಸೈಬರ್ ಕೆಫೆಯಲ್ಲಿ ಹ್ಸೀ ಮೃತ ಪಟ್ಟಿದ್ದು, ಸೈಬರ್ ಕೆಫೆಯ ಸಿಬ್ಬಂದಿಯೊರ್ವ ಚಲನರಹಿತವಾಗಿ ಕುಳಿತಿದ್ದ ಹ್ಸೀ ಯನ್ನು ಕಂಡು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ವಿಚಾರ ತಿಳಿದುಬಂದಿದೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಹ್ಸೀ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ನಿರಂತರವಾಗಿ ವಿಡಿಯೋ ಗೇಮ್‌ನಲ್ಲಿ ತೊಡಗಿದ್ದರಿಂದ ಹ್ಸೀ ಗೆ ಹೃದಯಾಘಾತವಾಗಿ, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ತೈಪೆ ಟೈಮ್ಸ್ ವರದಿ ಮಾಡಿದೆ. ಈ ಸೈಬರ್ ಕೆಫೆಗೆ ಹ್ಸೀ ಸಾಮಾನ್ಯ ಗ್ರಾಹಕನಾಗಿದ್ದು, ಆಗಾಗ್ಗ ಸೈಬರ್ ಕೆಫೆಗೆ ಬಂದು ವಿಡಿಯೋ ಗೇಮ್ ಆಡುತ್ತಿದ್ದನು ಎಂದು ಸೈಬರ್ ಕೆಫೆಯ ಮಾಲೀಕರು ತಿಳಿಸಿದ್ದಾರೆ.

ಒಟ್ಟಾರೆ ವಿಡಿಯೋ ಗೇಮ್ ಹುಚ್ಚು ಆತನ ಪ್ರಾಣಕ್ಕೆ ಎರವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com