ಬೀದಿ ಮಗುವನ್ನು ಹೊರದಬ್ಬಿದ ಮೆಕ್‌ಡೊನಾಲ್ಡ್!

ಮೆಕ್‌ಡೊನಾಲ್ಡ್ ಸಿಬ್ಬಂದಿ ಅನಾಥ ಮಗುವೊಂದರ ಮೇಲೆ ದರ್ಪ ತೋರಿ, ಮಗುವನ್ನು ಮಳಿಗೆಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಮೆಕ್‌ಡೊನಾಲ್ಡ್ ಸಿಬ್ಬಂದಿ ಅನಾಥ ಮಗುವೊಂದರ ಮೇಲೆ ದರ್ಪ ತೋರಿ, ಮಗುವನ್ನು ಮಳಿಗೆಯಿಂದ ಹೊರಕ್ಕೆಸೆದಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ, ರೊಚ್ಚಿಗೆದ್ದ ಸ್ಥಳೀಯರು ಮೆಕ್‌ಡೊನಾಲ್ಡ್ ಮಳಿಗೆಯಲ್ಲಿ ದಾಂದಲೆ ನಡೆಸಿದ್ದಾರೆ.

ಪುಣೆಯ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಸಿಬ್ಬಂದಿಯು ಬೀದಿಬದಿ ಮಗುವಿನ ಮೇಲೆ ತೋರಿದ ತಾರತಮ್ಯದ ಬಗ್ಗೆ ಶಹೀನಾ ಅಟ್ಟರ್‌ವಾಲಾ ಎಂಬ ಮಹಿಳೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದಿದ್ದರು. 'ನಾನು ನನ್ನ ಸ್ನೇಹಿತರೊಂದಿಗೆ ಅಲ್ಲಿ ಕೋಕ್ ತೆಗೆದುಕೊಂಡು ಹೊರಗೆ ಬರುತ್ತಿದ್ದಂತೆ ಮುಗ್ಧ ಮಗು ಆಸೆಯಿಂದ ನಮ್ಮನ್ನೇ ನೋಡಿತು. ತಕ್ಷಣ ನಾನು ಮಗುವನ್ನು ಒಳಗೆ ಕರೆದುಕೊಂಡು ಹೋಗಿ, ಆತನಿಗೂ ತಿನಿಸು ಕೊಡುವ ಎನ್ನುವಷ್ಟರಲ್ಲಿ ರೇಗಾಡಿದ ಸಿಬ್ಬಂದಿ, 'ಇಂಥವರಿಗೆ ಒಳಗೆ ಪ್ರವೇಶವಿಲ್ಲ' ಎನ್ನುತ್ತಾ ಮಗುವಿನ ಅಂಗಿಯ ಕಾಲರ್ ಹಿಡಿದು ಎಳೆದುಕೊಂಡು ಹೋಗಿ ಮಳಿಗೆಯ ಹೊರಕ್ಕೆ ದಬ್ಬಿದರು' ಎಂದು ಶಹೀನಾ ತಿಳಿಸಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೆಕ್ ಡೊನಾಲ್ಡ್, ಈ ಬಗ್ಗೆ ಆಂತರಿವಾಗಿ ತನಿಕೆ ನಡೆಸುತ್ತೇವೆ. ಹೊರಗಿನ ತನಿಖೆಗೆ ಅವಕಾಶ ಕೊಡುವುದಿಲ್ಲ. ನಾವು ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಮತ್ತು ಗೌರವಿಸುತ್ತೇವೆ. ಯಾವುದೇ ರೀತಿಯ ತಾರತಮ್ಯವನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com