ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು: ಜಪಾನ್ ವಿರುದ್ಧ ಚೀನಾ ಕೆಂಡಾಮಂಡಲ

ಅರುಣಾಚಲ ಪ್ರದೇಶವು ಭಾರತದ ಭಾಗ ಎಂದು ಹೇಳಿದ್ದರಿಂದ ಚೀನಾ ಜಪಾನ್ ವಿರುದ್ಧ ಕೆಂಡಾಮಂಡಲ...
ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶ

ನವದೆಹಲಿ: ಅರುಣಾಚಲ ಪ್ರದೇಶವು ಭಾರತದ ಭಾಗ ಎಂದು ಹೇಳಿದ್ದರಿಂದ ಚೀನಾ ಜಪಾನ್ ವಿರುದ್ಧ ಕೆಂಡಾಮಂಡಲವಾಗಿದೆ.

ಕಳೆದ ವಾರ ಭಾರತಕ್ಕೆ ಆಗಮಿಸಿದ್ದ ಜಪಾನ್ ವಿದೇಶಾಂಗ ಸಚಿವ ಫುಮಿಯೋ ಕಿಷಿದಿ ಅವರು ಇಂಡೋ-ಚೀನಾ ಗಡಿರಾಜ್ಯ ಅರುಣಾಚಲ ಪ್ರದೇಶ ಭಾರತದ ಭಾಗವಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಇದೀಗ ಜಪಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಗಡಿ ರಾಜ್ಯ ಅರುಣಾಚಲ ಪ್ರದೇಶ ತನಗೇ ಸೇರಬೇಕು ಎಂದು ಮೊಂಡುವಾದ ಮಾಡುತ್ತಿರುವ ಚೀನಾ ಈ ಬಗ್ಗೆ ರಾಜತಾಂತ್ರಿಕ ಪ್ರತಿಭಟನೆಗೆ ಮುಂದಾಗಿದೆ. ಈಗಾಗಲೇ ಜಪಾನ್ ರಾಯಭಾರ ಕಚೇರಿಗೆ ತನ್ನ ಪ್ರತಿಭಟನಾ ಪತ್ರವನ್ನು ರವಾನಿಸಿರುವ ಚೀನಾ ಜಪಾನ್ ವಿದೇಶಾಂಗ ಸಚಿವರ ಸ್ಪಷ್ಟನೆ ಕೇಳಿದೆ. 'ಜಪಾನ್ ಸಚಿವರ ಹೇಳಿಕೆ ಗಂಭೀರವಾಗಿದ್ದು, ಅವರು ಯಾವ ಅರ್ಥದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಜಪಾನ್ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ' ಎಂದು ಬೀಜಿಂಗ್ ತನ್ನ ಪ್ರತಿಭಟನಾ ಪತ್ರದಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com