ದೆಹಲಿಯಲ್ಲಿ ತೀವ್ರಗೊಂಡ ಚಳಿ: ಮತ್ತೆ 51 ರೈಲುಗಳ ಸಂಚಾರ ವಿಳಂಬ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ಮುಂದುವರೆದಿದ್ದು, ತೀವ್ರ ಮಂಜಿನಿಂದಾಗಿ ಸುಮಾರು 50ಕ್ಕೂ ಹೆಚ್ಚು..
ದೆಹಲಿಯಲ್ಲಿ ತೀವ್ರ ಚಳಿ (ಸಂಗ್ರಹ ಚಿತ್ರ)
ದೆಹಲಿಯಲ್ಲಿ ತೀವ್ರ ಚಳಿ (ಸಂಗ್ರಹ ಚಿತ್ರ)

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ಮುಂದುವರೆದಿದ್ದು, ತೀವ್ರ ಮಂಜಿನಿಂದಾಗಿ ಸುಮಾರು 50ಕ್ಕೂ ಹೆಚ್ಚು ರೈಲುಗಳ ಸಂಚಾರ ಅಸ್ತವ್ಯಸ್ಥಗೊಂಡಿದೆ.

ಉತ್ತರ ರೈಲ್ವೇ ಇಲಾಖೆಯ ಅಧಿಕಾರಿಗಳು ಹೇಳುವಂತೆ ದೆಹಲಿಯಲ್ಲಿ ತೀವ್ರ ಚಳಿ ಇದ್ದು, ಮಂಜುಮುಸುಕಿದ ವಾತಾವರಣದಿಂದಾಗಿ ಸುಮಾರು 51ಕ್ಕೂ ಹೆಚ್ಚು ರೈಲುಗಳ ಸಂಚಾರ ಅಸ್ತವ್ಯಸ್ಥಗೊಂಡಿದೆ. ಸುಮಾರು 600 ಮೀಟರ್‌ಗಳ ವರೆಗಿನ ದೂರದಲ್ಲಿನ ವಸ್ತುಗಳು ಕಾಣದಂತೆ ಮಂಜು ಆವರಿಸಿದ್ದು, 6 ಬಾರಿ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ದೆಹಲಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿದ್ದು ಮಂಗಳವಾರ 9.8 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಇನ್ನು ತೀವ್ರ ಮಂಜುಮುಸುಕಿದ ವಾತಾವರಣದಿಂದಾಗಿ ವಿಮಾನಗಳ ಹಾರಾಟಕ್ಕೂ ತೀವ್ರ ತೊಂದರೆಯಾಗಿದ್ದು, 35ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com