ಮಾರುಕಟ್ಟೆಯ 6 ಮಳಿಗೆಗಳಿಗೆ ಬೀಗ
ಮಾರುಕಟ್ಟೆಯ 6 ಮಳಿಗೆಗಳಿಗೆ ಬೀಗ

ಬಾಡಿಗೆ ಕರಾರು ನವೀಕರಿಸದ ಆರು ಮಳಿಗೆಗಳಿಗೆ ಬೀಗ

ಬಾಡಿಗೆ ಕರಾರು ನವೀಕರಣದ ಕೆ.ಆರ್. ಮಾರುಕಟ್ಟೆಯ 6 ಮಳಿಗೆಗಳಿಗೆ ಬಿಬಿಬಿಎಂಪಿ ಮಾರುಕಟ್ಟೆ ಸ್ಥಾಯಿ...

ಬೆಂಗಳೂರು: ಬಾಡಿಗೆ ಕರಾರು ನವೀಕರಣದ ಕೆ.ಆರ್. ಮಾರುಕಟ್ಟೆಯ 6 ಮಳಿಗೆಗಳಿಗೆ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಶುಕ್ರವಾರ ಬೀಗ ಜಡಿಯಿತು. ಅಷ್ಟೇ ಅಲ್ಲ, ವ್ಯಾಪಾರಿಯೊಬ್ಬರು 400 ಬಾಡಿಗೆಗೆ ಪಡೆದ ಮಳಿಗೆಯನ್ನು 50,000ಕ್ಕೆ ಉಪ ಬಾಡಿಗೆ ನೀಡಿ ವಂಚಿಸುತ್ತಿದ್ದುದು ಪತ್ತೆಯಾಗಿದೆ.

ಸಮಿತಿ ಅಧ್ಯಕ್ಷ ಬಿ.ಆರ್.ನಂಜುಂಡಪ್ಪ ನೇತೃತ್ವದಲ್ಲಿ ಮಾರುಕಟ್ಟೆಗೆ ಭೇಟಿ ನೀಡಿದ ಸದಸ್ಯರು ವ್ಯಾಪಾರಸ್ಥರು ಮಳಿಗೆಗಳನ್ನು ಬಾಡಿಗೆ ಪಡೆದಿರುವುದು ಹಾಗೂ ಅವುಗಳ ನಿರ್ವಹಣೆಯನ್ನು ಪರಿಶೀಲಿಸಿದರು. ಆಗ ಅನೇಕ ಮಳಿಗೆಗಳು ಬಾಡಿಗೆ ಪಾವತಿಸದಿರುವುದು ಗೊತ್ತಾಯಿತು. ಹಾಗೆಯೇ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದ 6 ಮಂದಿ ಬಾಡಿಗೆ ಕರಾರುಗಳನ್ನು ನವೀಕರಿಸದೆ ಮುಂದುವರಿಯುತ್ತಿರುವುದೂ ತಿಳಿಯಿತು. ಇದರಿಂದ ಸಿಟ್ಟಿಗೆದ್ದ ಸಮಿತಿ ಸದಸ್ಯರು ಅಂಥ ಮಳಿಗೆಗಳನ್ನು ಬಂದ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಾಡಿಗೆ ಕರಾರು ನವೀಕರಿಸದ 6 ಮಳಿಗೆಗಳಿಗೆ ಬೀಗ ಜಡಿದು ಬಂದ್ ಮಾಡಲಾಯಿತು.

ಇದೇ ವೇಳೆ ಬಾಡಿಗೆ ಪಾವತ್ತಿಸುತ್ತಿರುವ ವ್ಯಾಪಾರಸ್ಥರ ಮಳಿಗೆಗಳನ್ನು ಪರಿಶೀಲಿಸಿದಾಗ ಕೆಲವು ಮಳಿಗೆಗಳಲ್ಲಿ ಮೂಲ ಬಾಡಿಗೆದಾರರೇ ಇಲ್ಲದೆ ಬೇರೊಬ್ಬರು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂತು. ಆ ಬಗ್ಗೆ ಸಮಿತಿ ಸದಸ್ಯರು ವಿಚಾರಣೆ ನಡೆಸಿದಾಗ ಮೂಲ ಬಾಡಿಗೆದಾರರು ಹೆಚ್ಚಿನ ಬಾಡಿಗೆಗಾಗಿ ಉಪ ಬಾಡಿಗೆ ನೀಡಿರುವುದು ಸ್ಪಷ್ಟವಾಯಿತು.

ಇದರಿಂದ ಸಿಟ್ಟಿಗೆದ್ದ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಉಪ ಬಾಡಿಗೆದಾರರನ್ನು ವಿಚಾರಣೆ ಮಾಡಿದರು. ಆಗ ಮೂಲ ಬಾಡಿಗೆದಾರ ತನ್ನ ಮಳಿಗೆಯನ್ನು 400 ಬಾಡಿಗೆಗೆ ಪಡೆದು ಅದನ್ನು 50,000ಕ್ಕೆ ಉಪ ಬಾಡಿಗೆ ನೀಡಿರುವುದು ಗೊತ್ತಾಯಿತು. ಇದರಿಂದ ಗಾಬರಿಯಾದ ನಂಜುಂಡಪ್ಪ ಹಾಗೂ ಇತರ ಸದಸ್ಯರು, ಕೂಡಲೇ ಇದನ್ನು ರದ್ದುಗೊಳಿಸಬೇಕು. ಹಾಗೆಯೇ ಇದೇ ರೀತಿ ಅನೇಕ ಬಾಡಿಗೆದಾರರು ಹೆಚ್ಚಿನ ಮೊತ್ತಕ್ಕೆ ಉಪ ಬಾಡಿಗೆ ನೀಡಿರುವ ಶಂಕೆ ಇದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಬಾಡಿಗೆ ಕರಾರುಗಳನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Related Stories

No stories found.

Advertisement

X
Kannada Prabha
www.kannadaprabha.com