ಹೈದರಬಾದ್‌ನಲ್ಲಿ 250 ಬಾಲಕಾರ್ಮಿಕರ ರಕ್ಷಣೆ!

ಬಾಲ ಕಾರ್ಮಿಕ(ಸಾಂದರ್ಭಿಕ ಚಿತ್ರ)
ಬಾಲ ಕಾರ್ಮಿಕ(ಸಾಂದರ್ಭಿಕ ಚಿತ್ರ)
Updated on

ಹೈದರಬಾದ್: ತೀಕ್ಷ್ಣಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಹೈದರಬಾದ್ ದಕ್ಷಿಣ ವಲಯ ನಗರ ಪೊಲೀಸರು ಒಟ್ಟು 250 ಬಿಹಾರ ಮತ್ತು ಉತ್ತರಪ್ರದೇಶ ಮೂಲದ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಹೈದರಬಾದ್‌ನ ತಲಬ್‌ಕಟ್ಟ, ಹುಸೈನಿಯಲಂ ಭವಾನಿ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು 500 ಮಂದಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಹೆತ್ತವರಿಗೆ ಒಂದಷ್ಟು ಹಣ ನೀಡಿ ಮಕ್ಕಳನ್ನು ಖರೀದಿಸಿ ತಂದು ಕೆಲಸಕ್ಕಿಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದವರಲ್ಲಿ ಪ್ರಮುಖನಾಗಿರುವ ದೇಹದಾರ್ಢ್ಯ ಪಟು ಯಾಸೀನ್ ಪೈಲ್ವಾನ್ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಡು ಬಡತನದಲ್ಲಿರುವ ಉತ್ತರಪ್ರದೇಶದ ಹಾಗೂ ಬಿಹಾರಗಳ ತಂದೆ ತಾಯಿಯರಿಗೆ 20 ಸಾವಿರ ರು.ಗಳನ್ನು ನೀಡಿ ಮಕ್ಕಳನ್ನು ಕರೆ ತರಲಾಗಿತ್ತು. ಈ ಮಕ್ಕಳನ್ನೆಲ್ಲಾ ಕಟ್ಟಡವೊಂದರಲ್ಲಿ ಕೂಡಿ ಹಾಕಿ. ಈ ಮಕ್ಕಳನ್ನು ಬಳೆಗಳು, ಚರ್ಮದ ವಸ್ತುಗಳ ತಯಾರಿಕೆ ಸೇರಿದಂತೆ ಕಠಿಣ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.

ಅಕ್ರಮ ಅವ್ಯವಹಾರಗಳಲ್ಲಿ ತೊಡಗಿದ್ದ ರೌಡಿ ಶೀಟರ್‌ಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಕಾರ್ಯಾಚರಣೆ ವೇಳೆ ಅಕ್ಷರಶಃ ಈ ಮಕ್ಕಳನ್ನು ಕಂಡು ಸ್ವತಃ ಪೊಲೀಸರೇ ಕೆಲಕಾಲ ದಿಗ್ಬ್ರಮೆಗೊಂಡಿದ್ದರು. ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ದಿಢೀರ್ ಕಾರ್ಯಾಚರಣೆ ವೇಳೆ ಮಕ್ಕಳು ಪತ್ತೆಯಾಗಿದ್ದು, ಮಕ್ಕಳನೆಲ್ಲ ಅತ್ಯಂತ ಕೊಳಕು ಪ್ರದೇಶದಲ್ಲಿರಿಸಲಾಗಿತ್ತು. ಅವರಲ್ಲಿ ಅನೇಕ ಮಕ್ಕಳು ಅನಾರೋಗ್ಯ ಹಾಗೂ ಗಾಯಗಳಿಂದ ನರಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com