ರೈಲ್ವೇ
ರೈಲ್ವೇ

ಮುಂಬೈ: ರೈಲ್ವೇ ಅಪಘಾತದಲ್ಲಿ ದಿನಕ್ಕೆ 9 ಮಂದಿ ಸಾವು

Published on

ಮುಂಬೈ: ಮುಂಬೈ ಮಹಾನಗರದಲ್ಲಿನ ರೈಲ್ವೇ ಹಳಿಗಳ ಮೇಲೆ ನಡೆದ ಅಪಘಾತಗಳ ವರದಿಯನ್ನು ಮುಂಬೈ ರೈಲ್ವೇ ಪೊಲೀಸರು  ಬಿಡುಗಡೆಮಾಡಿದ್ದು, ಆ ಪ್ರಕಾರ 2014ರಲ್ಲಿ ದಿನಕ್ಕೆ ಸರಾಸರಿ 9 ಮಂದಿ ರೈಲು ಅಪಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈ ರೈಲ್ವೇ ಪೊಲೀಸರು ಬಿಡುಗಡೆ ಮಾಡಿರುವ 2014ರ ಆಕಸ್ಮಿಕ ಸಾವುಗಳ ಮಾಹಿತಿಯನ್ನಾಧರಿಸಿ ವರದಿ ಬಿಡುಗಡೆ ಮಾಡಲಾಗಿದ್ದು, ಅದರಂತೆ ಮುಂಬೈ ಮಹಾನಗರದಾದ್ಯಂತ ರಾಜ್ಯ ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್ಪಿ) ಸರಹದ್ದಿನಲ್ಲಿ ಒಟ್ಟು 2, 221 ಸಾವು ಮತ್ತು ಪಶ್ಚಿಮ ರೈಲ್ವೇ ಸರಹದ್ದಿನಲ್ಲಿ ಒಟ್ಟು 1, 202 ಆಕಸ್ಮಿಕ ಸಾವುಗಳು ಸಂಭವಿಸಿವೆ. 2014ರಲ್ಲಿ ಒಟ್ಟು ದಿನವೊಂದಕ್ಕೆ ಸರಾಸರಿ 9ಮಂದಿ ಸಾವನ್ನಪ್ಪಿದ್ದು, ರೈಲ್ವೇ ಹಳಿ ಮೇಲೆ ಆತ್ಮಹತ್ಯೆ, ಕೊಲೆ ಮತ್ತು ಹಳಿ ದಾಟುವ ವೇಳೆ ನಡೆಯುವ ಅಪಘಾತದಿಂದಾಗಿ ಈ ಸಾವುಗಳು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸೆಂಟ್ರಲ್ ರೈಲ್ವೇ ಇಲಾಖೆಯ ಸರಹದ್ದಿನಲ್ಲಿ ಸಂಭವಿಸಿದ ವಿವಿಧ ಅಪಘಾತ ಪ್ರಕರಣಗಳಲ್ಲಿ ಒಟ್ಟು 2, 062 ಮತ್ತು ಪಶ್ಚಿಮ ರೈಲ್ವೇ ಇಲಾಖೆಯ ಸರಹದ್ದಿನಲ್ಲಿ 1, 237ಮಂದಿಗೆ ಗಾಯಗಳಾಗಿದ್ದು, 2014ರಲ್ಲಿ ಒಟ್ಟಾರೆ ಗಾಯಾಳುಗಳ ಸಂಖ್ಯೆ 3, 299ರಷ್ಟಾಗಿದೆ. ಆ ಪ್ರಕಾರ ದಿನವೊಂದಕ್ಕೆ ಸರಾಸರಿ 8 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಇದೇ ವೇಳೆ ಅಪಘಾತಗಳ ಸಂಖ್ಯೆಗಳ ಏರಿಕೆ ಕಾರಣಗಳನ್ನು ನೀಡಿರುವ ರೈಲ್ವೇ ಅಧಿಕಾರಿಗಳು, ಪ್ರಯಾಣಿಕರ ನಿರ್ಲಕ್ಷ್ಯ, ಆತುರದಿಂದ ಚಲಿಸುತ್ತಿರುವ ರೈಲುಗಳನ್ನು ಹತ್ತುವುದೇ ಆಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com