ಹವಾಮಾನ ಒಪ್ಪಂದ: ಭಾರತಕ್ಕೆ ಯಾರ ಒತ್ತಡವೂ ಇಲ್ಲ

ಜಾಗತಿಕ ಹವಾಮಾನ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಮೇಲೆ ಯಾವುದೋ ರಾಷ್ಟ್ರ ಒತ್ತಡ ಹೇರುತ್ತಿದೆ...
ಹವಾಮಾನ ಒಪ್ಪಂದ: ಭಾರತಕ್ಕೆ ಯಾರ ಒತ್ತಡವೂ ಇಲ್ಲ

ನವದೆಹಲಿ: ಜಾಗತಿಕ ಹವಾಮಾನ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಮೇಲೆ ಯಾವುದೋ ರಾಷ್ಟ್ರ ಒತ್ತಡ ಹೇರುತ್ತಿದೆ ಎಂಬ ವಾದವನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಸ್ವತಂತ್ರ ರಾಷ್ಟ್ರ. ಯಾವುದೇ ರಾಷ್ಟ್ರದ ಒತ್ತಡವೂ ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹವಾಮಾನ ಬದಲಾವಣೆ ಎನ್ನುವುದೇ ಒಂದು ಒತ್ತಡ. ಜಾಗತಿಕ ತಾಪಮಾನವೇ ಒತ್ತಡ. ಭವಿಷ್ಯದ ತಲೆಮಾರಿನ ಬಗ್ಗೆ ಯಾರಿಗೆ ಕಾಳಜಿ ಇದೆಯೋ ಅಂಥವರು ಹವಾಮಾನ ಬದಲಾವಣೆ ಬಗ್ಗೆ ಎಚ್ಚೆತ್ತುಕೊಳ್ಳುತ್ತಾರೆ. ಮುಂದಿನ ತಲೆಮಾರಿನವವರಿಗೆ ಉಜ್ವಲ ಭವಿಷ್ಯ, ಉತ್ತಮ ವಾತಾವರಣ ಒದಗಿಸಲು ನೆರವಾಗುವ ನೀತಿ ನಿಬಂಧನೆಗಳನ್ನು ಜಾರಿ ಮಾಡುತ್ತಾರೆ ಎಂದೂ ಪ್ರಧಾನಿ ಹೇಳಿದರು.

ಏತನ್ಮಧ್ಯೆ, ಸ್ವಚ್ಛ ಇಂಧನ ಮತ್ತು ಹವಾಮಾನ ಬದಲಾವಣೆ ವಿಚಾರಗಳಲ್ಲಿ ಭಾರತ-ಅಮೆರಿಕದ ಸಹಕಾರ ಹೆಚ್ಚಿಸುವುದಾಗಿ ಘೋಷಿಸಿದ ಮೋದಿ, ವರ್ಷಾಂತ್ಯದಲ್ಲಿ ಪ್ಯಾರಿಸ್‍ನಲ್ಲಿ ನಡೆಯಲಿರುವ ಹವಾಮಾನ ಸಮಾವೇಶದಲ್ಲಿ ಒಪ್ಪಂದ ಯಶಸ್ವಿಯಾಗುವ ಭರವಸೆಯಿದೆ ಎಂದರು.ಇದೇ ವೇಳೆ, ಹವಾಮಾನ ಒಪ್ಪಂದದಲ್ಲಿ ಭಾರತದ ಧ್ವನಿಗೆ ಹೆಚ್ಚಿನ ಮಹತ್ವವಿದೆ ಎಂದರು ಒಬಾಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com