ಬಿರುಗಾಳಿಗೆ ತತ್ತರಿಸಿದ ಈಶಾನ್ಯ ಅಮೆರಿಕಾ: ತುರ್ತು ಪರಿಸ್ಥಿತಿ ಘೋಷಣೆ

ಅಮೆರಿಕದ ಈಶಾನ್ಯ ರಾಜ್ಯಗಳ ಮೇಲೆ ಕಳೆದ ರಾತ್ರಿ ಭಾರೀ ಬಿರುಗಾಳಿ ಅಪ್ಪಳಿಸಿದ್ದು, ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ...
ಬಿರುಗಾಳಿಗೆ ತತ್ತರಿಸಿದ ಈಶಾನ್ಯ ಅಮೆರಿಕಾ: ತುರ್ತು ಪರಿಸ್ಥಿತಿ ಘೋಷಣೆ

ನ್ಯೂಯಾರ್ಕ್: ಅಮೆರಿಕದ ಈಶಾನ್ಯ ರಾಜ್ಯಗಳ ಮೇಲೆ ಕಳೆದ ರಾತ್ರಿ ಭಾರೀ ಬಿರುಗಾಳಿ ಅಪ್ಪಳಿಸಿದ್ದು, ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಸುಮಾರು 60 ಮಿಲಿಯನ್‌ಗೂ ಹೆಚ್ಚಿನ ಜನ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 36 ಅಡಿಗಳಷ್ಟು ಎತ್ತರದ ಹಿಮ ಕುಸಿದಿದೆ. ನ್ಯೂಯಾರ್ಕ್, ನ್ಯೂಜೆರ್ಸಿ, ಕೊನೆಕ್ಟಿಕಟ್, ರ್ಹೋ ಡೆ ಐಲೆಂಡ್, ಮೆಸಾಚುಸೆಟ್ಸ್ ಹಾಗೂ ನ್ಯೂ ಹ್ಯಾಂಪ್‌ಷೈರ್‌ಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ರಾಜ್ಯಾಡಳಿತ ಇಲಾಖೆಗಳು ತಿಳಿಸಿವೆ.

2012ರಿಂದೀಚೆಗೆ ಇಂತಹ ಮರಳು ಮಿಶ್ರಿತ ಬಿರುಗಾಳಿ ಅಮೆರಿಕದ ಮೇಲೆ ಅಪ್ಪಳಿಸಿರಲಿಲ್ಲ. ಈ ಬಿರುಗಾಳಿಯಲ್ಲಿ ಶೇ.20ರಷ್ಟು ಅಮೆರಿಕ ಜನಸಂಖ್ಯೆಯ ಜೀವನ ಸಂಕಷ್ಟದಲ್ಲಿದೆ. ಎಲ್ಲೆಂದರಲ್ಲಿ ಮರಳು ಮತ್ತು ಹಿಮದ ರಾಶಿ ಬೀಳುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಮುಂಜಾನೆ ಮರಳು ಮಿಶ್ರಿತ ಬಿರುಗಾಳಿ ಇನ್ನಷ್ಟು ಉಗ್ರರೂಪ ಪಡೆದಿದ್ದು, ಜನ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ವಾಹನ ಹೊರತುಪಡಿಸಿ ಯಾವುದೇ ವಾಹನಗಳು ರಸ್ತೆಗಿಳಿಯದಂತೆ ಕಟ್ಟಾಜ್ಞೆ ಹೊರಡಿಸಲಾಗಿದೆ ಎಂದಿರುವ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುವೋವೊ, ಆಜ್ಞೆ ಉಲ್ಲಂಘಿಸಿ ರಸ್ತೆಗಿಳಿಯುವ ವಾಹನಕ್ಕೆ 300 ಡಾಲರ್ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com