70 ಮಂದಿಯಲ್ಲಿ ಹೆಚ್1ಎನ್1 ಸೋಂಕು ಪತ್ತೆ

ಮಹಾಮಾರಿ ಹಂದಿ ಜ್ವರ ದೇಶದೆಲ್ಲೆಡೆ ಹರಡುತ್ತಿದ್ದು, ಹರಿಯಾಣ ಮತ್ತು ತೆಲಂಗಾಣದಲ್ಲಿ 70 ಮಂದಿಯಲ್ಲಿ...
70 ಮಂದಿಯಲ್ಲಿ ಹೆಚ್1ಎನ್1 ಸೋಂಕು ಪತ್ತೆ

ನವದೆಹಲಿ: ಮಹಾಮಾರಿ ಹಂದಿ ಜ್ವರ ದೇಶದೆಲ್ಲೆಡೆ ಹರಡುತ್ತಿದ್ದು, ಹರಿಯಾಣ ಮತ್ತು ತೆಲಂಗಾಣದಲ್ಲಿ 70 ಮಂದಿಯಲ್ಲಿ ಹಂದಿ ಜ್ವರದ ಸೋಂಕು ಪತ್ತೆಯಾಗಿದೆ.

2011 ರಿಂದೀಚೆಗೆ ಭಾರತದಲ್ಲಿ ವ್ಯಾಪಕವಾಗಿ ಹರಡಿ ಭೀತಿ ಸೃಷ್ಟಿಸಿದ್ದ ಮಹಾಮಾರಿ ಹಂದಿಜ್ವರ ಮತ್ತೆ ವಕ್ಕರಿಸಿದ್ದು, ರಾಜಧಾನಿ ದೆಹಲಿಯೊಂದರಲ್ಲೇ 285 ಮಂದಿಗೆ ಹಂದಿಜ್ವರದ ಲಕ್ಷಣಗಳು ಕಾಣಿಸಿಕೊಂಡಿದೆ. ಇನ್ನು ರಾಜಸ್ತಾನದಲ್ಲಿ 27, ಹರಿಯಾಣದಲ್ಲಿ 41 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 7 ಜನರಲ್ಲಿ ಜ್ವರ ಬರುವ ಲಕ್ಷಣಗಳು ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ತೆಲಂಗಾಣ ರಾಜ್ಯದಲ್ಲಿ ಓರ್ವ ಮಹಿಳೆ ಸೇರಿದಂತೆ 3 ಮಂದಿಯನ್ನು ಮಹಾಮಾರಿ ಬಲಿ ತೆಗೆದುಕೊಂಡಿತ್ತು. ಆಂಧ್ರಪ್ರದೇಶ 6 ಮಂದಿ ಹಾಗೂ ರಾಜಸ್ತಾನದ 383 ಮಂದಿಯಲ್ಲಿ ಹೆಚ್1ಎನ್1 ಇರುವುದಾಗಿ ಖಚಿತವಾಗಿದೆ. ಚಳಿಗಾಲದಲ್ಲಿ ಈ ಜ್ವರದ ಹಾವಳಿ ಹೆಚ್ಚಾಗಲಿದ್ದು, ಆರೋಗ್ಯ ಇಲಾಖೆಗೆ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com