'ನಿನ್ನೆ ಚಾರ್ಲಿ ಹೆಬ್ಡೋ, ನಾಳೆ ದಿನಮಲಾರ್': ತಮಿಳು ಪತ್ರಿಕೆಗೆ ಬೆದರಿಕೆ

ಚಾರ್ಲಿ ಹೆಬ್ಡೋ ಮಾದರಿಯಂತೆಯೇ ತಮಿಳು ದಿನಪತ್ರಿಕೆಯೊಂದರ ಮೇಲೆ ದಾಳಿ ನಡೆಸುತ್ತೇವೆ ಎಂದು...
ದಿನಮಲಾರ್ ದಿನಪತ್ರಿಕೆ (ಸಂಗ್ರಹ ಚಿತ್ರ)
ದಿನಮಲಾರ್ ದಿನಪತ್ರಿಕೆ (ಸಂಗ್ರಹ ಚಿತ್ರ)

ಚೆನ್ನೈ: ಚಾರ್ಲಿ ಹೆಬ್ಡೋ ಮಾದರಿಯಂತೆಯೇ ತಮಿಳು ದಿನಪತ್ರಿಕೆಯೊಂದರ ಮೇಲೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಪತ್ರವೊಂದು ಬಂದಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ತಮಿಳು ದಿನ ಪತ್ರಿಕೆ ದಿನಮಲಾರ್ ಮೇಲೆ ದಾಳಿ ನಡೆಸುವುದಾಗಿ ಕಚೇರಿಗೆ ಪತ್ರಬಂದಿದ್ದು, ಪತ್ರದಲ್ಲಿ ಚಾರ್ಲಿಹೆಬ್ಡೊ ಮಾದರಿಯಲ್ಲಿಯೇ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ಆದರೆ ಪತ್ರವನ್ನು ಯಾರು ಕಳುಹಿಸಿದ್ದಾರೆ ಎಂಬುದು ಮಾತ್ರ ಈ ವರೆಗೂ ತಿಳಿದುಬಂದಿಲ್ಲ. ಪ್ರಸ್ತುತ ಪತ್ರಿಕಾಲಯದ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದು, ಪತ್ರಿಕಾ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪತ್ರಿಕಾ ಕಚೇರಿಗೆ ಬೆದರಿಕೆ ಪತ್ರ ಬಂದಿರುವ ಕುರಿತು ದೂರು ದಾಖಲಾಗಿದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಬಹುಶಃ ಇದು ಕಿಡಿಗೇಡಿಗಳ ಕೃತ್ಯವಾಗಿರಬಹುದು. ಅಥವಾ ಇದರ ಹಿಂದೆ ಬೇರೇನೋ ಷಡ್ಯಂತ್ರವಿರಬಹುದು. ಸಂಪೂರ್ಣ ತನಿಖೆಯ ಬಳಿಕವಷ್ಟೇ ಸತ್ಯಾಂಶ ಬಯಲಾಗಲಿದೆ ಎಂದು ಹೇಳಿದ್ದಾರೆ.

ಇಸಿಸ್ ಮುಖ್ಯಸ್ಥನ ಕುರಿತ ವ್ಯಂಗ್ಯಚಿತ್ರ ಪ್ರಕಟವಾದ ಹಿನ್ನಲೆಯಲ್ಲಿ ಪ್ಯಾರಿಸ್ನ ಚಾರ್ಲಿಹೆಬ್ಡೋ ಪತ್ರಿಕೆ ವಿರುದ್ಧ ಆಕ್ರೋಶಗೊಂಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು, ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಸಂಸ್ಥೆ ಸಂಪಾದಕ ಮಂಡಳಿಯ 12 ಮಂದಿ ಸಿಬ್ಬಂದಿಗಳನ್ನು ಕೊಂದು ಹಾಕಿದ್ದರು. ಈ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದೇ ಮಾದರಿಯ ದಾಳಿ ನಡೆಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com