
ನವದೆಹಲಿ: 3ಜಿ ಮತ್ತು 2ಜಿ ತರಾಂಗಾಂತರ ಹರಾಜಿನಿಂದ ರು.1 ಲಕ್ಷ ಕೋಟಿ ಪಡೆಯಬೇಕು. ಇದು ಕೇಂದ್ರ ಸರ್ಕಾರದ ಇರಾದೆ.
ಇದಕ್ಕಾಗಿ 3ಜಿ ಸ್ಪೆಕ್ಟ್ರಂನ ಮೆಗಾ ಹರ್ಟ್ಸ್‍ಗೆ ರು.3,705 ಮೂಲ ದರ ನಿಗದಿ ಮಾಡಿದೆ. ಇದರಿಂದಾಗಿಯೇ ಕೇಂದ್ರಕ್ಕೆ ರು.17 ಸಾವಿರ ಕೋಟಿ ಸಿಗಲಿದೆ. ಇದರ ಜತೆಗೆ ಮೂಲಭೂತ ಮೊಬೈಲ್ ಸೇವೆ ನೀಡುವ 2 ಜಿ ಸ್ಪೆಕ್ಟ್ರಂ ಅನ್ನು ಹರಾಜು ಹಾಕಲು ಕೇಂದ್ರ ಮುಂದಾಗಿದೆ. ಮೂರು ಬ್ಯಾಂಡ್‍ಗಿದ್ದು, ಮಾ.4ರಂದು ಹರಾಜು ನಡೆಯಲಿದೆ. ಇದುವರೆಗಿನ ಹರಾಜಿನಿಂದ ಕೇಂದ್ರ ಪಡೆಯಲಿರುವ ಅತಿ ದೊಡ್ಡ ಮೊತ್ತ ಇದಾಗಲಿದೆ. ಗಮನಾರ್ಹ ಅಂಶವೆಂದರೆ 2 ಜಿ ಮತ್ತು 3ಜಿ ಹರಾಜಿನಿಂದ ಒಟ್ಟು ರು.82,395 ಕೋಟಿ ಬೊಕ್ಕಸಕ್ಕೆ ಬರಲಿದೆ ಎನ್ನುವುದು ಮೋದಿ ನೇತೃತ್ವದ ಸರ್ಕಾರದ ಲೆಕ್ಕಾಚಾರ.
ಈ ಹಿಂದೆ 2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿದಂತೆ ಮೂರು ಬ್ಯಾಂಡ್‍ಗಳ ತರಂಗಾಂತರವನ್ನು ಮಾರಾಟ ಮಾಡುವುದರಿಂದ ರು.64,840 ಕೋಟಿಗೆ ಹರಾಜು ಹಾಕುವ ಬಗ್ಗೆ ಮೋದಿ ಸರ್ಕಾರ ನಿರ್ಧರಿಸಿತ್ತು. ದೆಹಲಿ, ಮುಂಬೈ, ಕೊಲ್ಕತಾ ಮತ್ತು ಜಮ್ಮು-ಕಾಶ್ಮೀರವನ್ನು ಹೊರತು ಪಡಿಸಿದ ದೂರಸಂಪರ್ಕ ವಲಯಗಳಿಗೆ 900 ಮೆಗಾ ಹರ್ಟ್ಸ್ ತರಂಗಾಂತರ ಎಂದು ನಿಗದಿಪಡಿಸಲಾಗಿದ್ದು, ಅದಕ್ಕೆ ರು.2,191 ಕೋಟಿ ದರ ನಿಗದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.
2010ರಲ್ಲಿ ನಡೆಸಿದ್ದ 3ಜಿ ಸ್ಪೆಕ್ಟ್ರಂ ಹರಾಜಿನ ವೇಳೆ ಅಂದಿನ ಕೇಂದ್ರ ಸರ್ಕಾರ ಪ್ರತಿ ಮೆಗಾ ಹರ್ಟ್ಸ್‍ಗೆ ರು700 ಕೋಟಿ ನಿಗದಿ ಮಾಡಿತ್ತು. ಕೋಲ್ ಇಂಡಿಯಾ ಷೇರು ಹರಾಜು ನಾಳೆ ಮಹತ್ವದ ನಿರ್ಣಯವೊಂದರಲ್ಲಿ ಕೇಂದ್ರ ಸರ್ಕಾರ ಕೋಲ್ ಇಂಡಿಯಾದ ಶೇ.10ರಷ್ಟು ಷೇರು ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಜ.30ರಂದು ಮಾರಾಟ ನಡೆಯಲಿದೆ. ಈ ಮೂಲಕ ರು.24 ಸಾವಿರ ಕೋಟಿ ಗಳಿಸುವ ಇರಾದೆ ಹೊಂದಿದೆ. ಈ ಪ್ರಕ್ರಿಯೆ ದೇಶದ ಅತಿ ದೊಡ್ಡ ಷೇರು ಮಾರಾಟ ಪ್ರಕ್ರಿಯೇ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ತನ್ನ ಪಾಲಿನ 31.58 ಕೋಟಿ ಷೇರುಗಳನ್ನು ಮಾರಲಿದೆ. ಈ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ ಮೂಲಕ ಹಾಲಿ ಹಣಕಾಸು ವರ್ಷದಲ್ಲಿ ರು.43,425 ಕೋಟಿ ಸಂಗ್ರಹಿಸಬೇಕು ಎಂಬ ನಿರ್ಧಾರದಲ್ಲಿ ಶೇ.50ರ ಗುರಿ ಸಾ„ಸಿದಂತಾಗುತ್ತದೆ. ಷೇರಿನ ಕನಿಷ್ಠ ದರವನ್ನು ಗುರುವಾರ ಪ್ರಕಟಿಸಲಾಗುತ್ತದೆ.
ವೋಡಾಫೋನ್ ಕೇಸು ಮೇಲ್ಮನವಿ ಇಲ್ಲ
ಯುಪಿಎ ಸರ್ಕಾರದ ಅವಧಿಯಲ್ಲಿ ಚರ್ಚೆಯಾಗಿದ್ದ ರು.3,200 ಕೋಟಿ ವೊಡಾಫೋನ್ ತೆರಿಗೆ ಪ್ರಕರಣದಲ್ಲಿ ಕಾನೂನು ಹೋರಾಟ ಮುಂದುವರಿಸದಿರಲು ಕೇಂದ್ರ ಮುಂದಾಗಿದೆ. ಈ ನಿಟ್ಟಿನಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಲು ನಿರ್ಧರಿಸಲಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಇಂಥ ಕ್ರಮ ಕೈಗೊಳ್ಳಲಾಗಿದೆ.
ಏನಿದು ಪ್ರಕರಣ?
ವೊಡಾಫೋನ್ ಇಂಡಿಯಾದ ಷೇರುಗಳನ್ನು ಬ್ರಿಟನ್‍ನಲ್ಲಿರುವ ಮಾತೃ ಕಂಪನಿ ವೊಡಾಫೋನ್ 2010ರಲ್ಲಿ ಖರೀದಿಸಿತ್ತು. ದೇಶದಿಂದ ಹೊರಗೆ ನಡೆದಿದ್ದ ಮಾರಾಟ ಪ್ರಕ್ರಿಯೆಯಿಂದಾಗಿ ಕೇಂದ್ರ ಸರ್ಕಾರಕ್ಕೆ ನಷ್ಟ ಉಂಟಾಗಿದೆ. ಹೀಗಾಗಿ, ಹೆಚ್ಚುವರಿಯಾಗಿ ರು.3,200 ಕೋಟಿ ತೆರಿಗೆ ಪಾವತಿ ಮಾಡಬೇಕೆಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕಂಪನಿ ಬಾಂಬೆ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಿತ್ತು. 2014 ಅಕ್ಟೋಬರ್‍ನಲ್ಲಿ ಹೈಕೋರ್ಟ್ ಕಂಪನಿ ಪರವಾಗಿ ತೀರ್ಪು ನೀಡಿತ್ತು.
Advertisement