ಚುನಾವಣೆ ಹೊತ್ತಲ್ಲಿ ಬಿಹಾರ ಜನತೆಗೆ ಬಂಪರ್ ಕೊಡುಗೆ

ಚುನಾವಣೆ ಹೊಸ್ತಿಲಲ್ಲಿರುವ ಬಿಹಾರ ಜನತೆಗೆ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಡಬ್ಬಲ್ ಬಂಪರ್ ಕೊಡುಗೆ ನೀಡಿದ್ದಾರೆ.
ನಿತಿಶ್ ಕುಮಾರ್
ನಿತಿಶ್ ಕುಮಾರ್

ಪಾಟ್ನಾ: ಚುನಾವಣೆ ಹೊಸ್ತಿಲಲ್ಲಿರುವ ಬಿಹಾರ ಜನತೆಗೆ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಡಬ್ಬಲ್ ಬಂಪರ್ ಕೊಡುಗೆ ನೀಡಿದ್ದಾರೆ.

ರಾಜ್ಯ ಸರ್ಕಾರ ಗುತ್ತಿಗೆಗಳಲ್ಲಿ ಒಬಿಸಿ, ಇಬಿಸಿ ಹಾಗೂ ಎಸ್‌ಸಿ, ಎಸ್‌ಟಿಗೆ ಶೇ.50 ಮೀಸಲಾತಿ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸರ್ಕಾರದಿಂದ ಸಮವಸ್ತ್ರ ಹಾಗೂ ಸೈಕಲ್ ಪಡೆಯಲು ಬೇಕಾಗಿದ್ದ ಶೇ. 75ರಷ್ಟು ಹಾಜರಾತಿಯನ್ನು ನಿತಿಶ್ ಕುಮಾರ್ ರದ್ದುಗೊಳಿಸಿದ್ದಾರೆ.

ಈ ಪ್ರಮುಖ ನಿರ್ಧಾರಗಳಿಗೆ ಬಿಹಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಿಂದಿನ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಈ ಪ್ರಸ್ತಾಪ ಮಾಡಿದ್ದರು. ಅಲ್ಲದೆ 50 ಲಕ್ಷ ರುಪಾಯಿವರೆಗಿನ ಕಾಮಗಾರಿಗಳ ಗುತ್ತಿಗೆಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಲು ಮುಂದಾಗಿದ್ದರು. ಇದೀಗ ನಿತಿಶ್ ಕುಮಾರ್ ಸರ್ಕಾರ 15 ಲಕ್ಷದ ವರೆಗಿನ ಕಾಮಗಾರಿಗಳಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com