ಜಮ್ಮ-ಕಾಶ್ಮೀರ ಗಡಿಯಲ್ಲಿ ಮುಂದುವರೆದ ಪಾಕ್ ಗುಂಡಿನ ದಾಳಿ

ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯ ಉಪಟಳ ಮತ್ತೆ ಮುಂದುವರೆದಿದ್ದು, ಭಾನುವಾರ ರಾತ್ರಿಯಿಡೀ ಗಡಿಯ ಉದ್ದಕ್ಕೂ ಅಪ್ರಚೋದಿತ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ...
ದಾಳಿ ನಡೆಸುತ್ತಿರುವ ಪಾಕ್ ಸೇನೆಪಡೆಗಳನ್ನು ಸದೆ ಬಡಿಯಲು ಹುಡುಕಾಟ ನಡೆಸುತ್ತಿರುವ ಭಾರತೀಯ ಸೇನಾ ಪಡೆಯ ಯೋಧರು.
ದಾಳಿ ನಡೆಸುತ್ತಿರುವ ಪಾಕ್ ಸೇನೆಪಡೆಗಳನ್ನು ಸದೆ ಬಡಿಯಲು ಹುಡುಕಾಟ ನಡೆಸುತ್ತಿರುವ ಭಾರತೀಯ ಸೇನಾ ಪಡೆಯ ಯೋಧರು.

ಜಮ್ಮು: ಜಮ್ಮು-ಕಾಶ್ಮೀರ ಗಡಿ  ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯ ಉಪಟಳ ಮತ್ತೆ ಮುಂದುವರೆದಿದ್ದು, ಭಾನುವಾರ ರಾತ್ರಿಯಿಡೀ ಗಡಿಯ ಉದ್ದಕ್ಕೂ ಅಪ್ರಚೋದಿತ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ಜಮ್ಮ-ಕಾಶ್ಮೀರದ ಅರಿನಾ ಸೆಕ್ಟರ್ ಗಡಿ ಪ್ರದೇಶ ಬಳಿ ಪಾಕ್ ಸೇನಾ ಪಡೆ ನಿನ್ನೆ ರಾತ್ರಿಯಿಂದಲೂ ಈ ವರೆಗೂ 3 ಬಾರಿ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.  ಪಾಕಿಸ್ತಾನ ಸೇನಾ ಪಡೆಗಳು ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿ ಈವರೆಗೂ ಮುಂದುವರೆಯುತ್ತಿದ್ದು, ಗುಂಡಿನ ದಾಳಿಗೆ  ಭಯಭೀತರಾಗಿರುವ ಸ್ಥಳೀಯ ನಾಗರೀಕರು ಇತರೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಭಾರತೀಯ ಗಡಿ ಪ್ರದೇಶದ ಒಳ ನುಸುಳುವ ಸಲುವಾಗಿ ರಾತ್ರಿಯಿಡೀ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದ್ದು, ಈ ವರೆಗೂ ಸ್ಥಳದಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿಲ್ಲದಿರುವುದಾಗಿ ತಿಳಿದುಬಂದಿದೆ. ಪಾಕ್ ಸೇನೆಯ ಗುಂಡಿನ ದಾಳಿಗೆ ಭಾರತೀಯ ಸೇನೆ ಪಡೆಗಳು ದಿಟ್ಟ  ಉತ್ತರ ನೀಡುತ್ತಿದ್ದು, ಘಟನೆ ವೇಳೆ ಈವರೆಗೂ ಪ್ರಾಣಪಾಯಗಳಾಗಲಿ, ಗಾಯಗಳಾಗಿರುವುದಾಗಿ ತಿಳಿದುಬಂದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com