ಚೀನಾ ಮೌತ್ ಫ್ರೆಶ್ನರ್‍ ಗೆ ಕರಾವಳಿ ಅಡಕೆ ಬಳಕೆ

ಜಗಿದು ಉಗುಳುವ ಗುಟ್ಕಾಗೆ ಪರ್ಯಾಯವಾಗಿ ಚೀನಾದಲ್ಲಿ ಅಡಕೆಯ ಮಾತ್ ಫ್ರೆಶ್ನರ್ ಉತ್ಪನ್ನ ಸಿದ್ಧವಾಗುತ್ತಿದ್ದು, ಇದಕ್ಕೆ ಭಾರತದ ಅಡಕೆಗೆ ಬೇಡಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಜಗಿದು ಉಗುಳುವ ಗುಟ್ಕಾಗೆ ಪರ್ಯಾಯವಾಗಿ ಚೀನಾದಲ್ಲಿ ಅಡಕೆಯ ಮಾತ್ ಫ್ರೆಶ್ನರ್ ಉತ್ಪನ್ನ ಸಿದ್ಧವಾಗುತ್ತಿದ್ದು, ಇದಕ್ಕೆ ಭಾರತದ ಅಡಕೆಗೆ ಬೇಡಿಕೆ ಬಂದಿದೆ. ಇದು ಕೆಂಪಡಕೆ ಬೆಳೆಗಾರರಿಗೆ ನೆರವಾಗಲಿದೆ.
ಮೌತ್ ಫ್ರೆಶ್ನರ್ ತಯಾರಿಕೆಗೆ ಭಾರತದ ಎಳತು ಅಡಕೆಗೆ ಚೀನಾ ಬೇಡಿಕೆ ಸಲ್ಲಿಸಿದ್ದು, ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ 3,200 ಕ್ವಿಂಟಾಲ್ ಅಡಕೆ ರಫ್ತು ಮಾಡಲಿದೆ. ಮೊದಲ ಸುತ್ತಿನ ಮಾತುಕತೆ ಮುಗಿದಿದ್ದು ಎರಡನೇ ಸುತ್ತು ಮಾತುಕತೆ ನಡೆದಿದೆ. ಚೀನಾದ ಕಿಂಗ್ ಆಫ್ ಟೇಸ್ಟ್ ಕಂಪನಿ ನಿಯೋಗ ಕರಾವಳಿ, ಮಲೆನಾಡು ಅಡಕೆ ಬೆಳೆ ಪ್ರದೇಶಕ್ಕೆ ಎರಡು ವಾರ ಪ್ರವಾಸದಲ್ಲಿದೆ. ಈ ವೇಳೆ ಚೀನಾದಲ್ಲಿ ಪ್ರಸಕ್ತ ಉತ್ಪಾದಿಸುತ್ತಿರುವ ಅದರದೇ ಮೌತ್ ಫ್ರೆಶ್ನರ್ ಉತ್ಪನ್ನದ ಸ್ಯಾಂಪಲ್ ತಂದಿದ್ದು, ಇದನ್ನು ಗುಟ್ಕಾಗೆ ಪರ್ಯಾವಾಗಿ ಉಪಯೋಗಿಸಲಾಗುತ್ತಿದೆ.
ಇದು ಚೀನಾದಲ್ಲಿ ವ್ಯಾಪಕ ಜನಪ್ರಿಯತೆ ಪಡೆಯುತ್ತಿರುವುದರಿಂದ ಕರ್ನಾಟಕದಿಂದ ಅಡಕೆಗೆ ಬೇಡಿಕೆ ಸಲ್ಲಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚೀನಾದಲ್ಲಿ 1.22 ಮೆಟ್ರಿಕ್ ಟನ್ ಅಡಕೆ ಬೆಳೆಯುತ್ತಾರೆ. ಅದು ಮೌತ್ ಫ್ರೆಶ್ನರ್ ಉತ್ಪಾದನೆಗೆ ಸಾಲುವುದಿಲ್ಲ. ಅದಕ್ಕಾಗಿ ಇಲ್ಲಿಂದ ಎಳತು ಅಡಕೆ ಸಿಪ್ಪೆಯನ್ನು ಆಮದು ಮಾಡಿಕೊಳ್ಳಲಿದೆ. ಮೊದಲ ಹಂತದಲ್ಲಿ 10 ಟನ್ ರಫ್ತು ಮಾಡಲಾಗುವುದು.
ಇದಕ್ಕಾಗಿ ಪುತ್ತೂರು ಕ್ಯಾಂಪ್ಕೋದಲ್ಲಿ ಓವನ್‍ಗಳಲ್ಲಿ ಎಳತು ಅಡಕೆ ಬೇಯಿಸಿ ಸಂಸ್ಕರಿಸಬೇಕಾಗುವುದು. ಎಳತು ಅಡಕೆಯನ್ನು ಕೆಂಪಡಕೆ ಕೊಯ್ಲಿನ ಅವಧಿ 15 ದಿನಕ್ಕೆ ಮುನ್ನ ಕೊಯ್ಲು ಮಾಡಬೇಕು. ಸಂಸ್ಕರಣೆ ವಿಧಾನವನ್ನು ಚೀನಾ ನಿಯೋಗ ಹೇಳಿಕೊಡಲಿದೆ. ಇದು ಕೆಂಪಡಕೆ ಬೆಳೆಗಾರರಿಗೆ ನೆರವಾಗಲಿದೆ ಎಂದರು.
ಕೆಂಪಡಕೆಗೆ ವರ: ಚೀನಾದಲ್ಲಿ ಈ ಉತ್ಪನ್ನಕ್ಕೆ ರು.10 ದರ, ಇಲ್ಲಿ ಇಲ್ಲಿ ಎಳತು ಅಡಕೆ ಕೇಜಿಗೆ ರು160 ದರವಿದೆ ಎಂದು ಚೀನಾ ನಿಯೋಗ ತಿಳಿಸಿದೆ. ಮಾರುಕಟ್ಟೆ ದರ ವನ್ನು ಇನ್ನೂ ಅಂತಿಮಗೊಳಿಸಿಲ್ಲ. ಚೀನಾ ನಿಯೋಗ ಪುತ್ತೂರು, ಶಿವಮೊಗ್ಗ, ತುಮಕೂರಿಗೆ ಭೇಟಿ ನೀಡಿ ಅಡಕೆಯನ್ನು ಪರಿಶೀಲಿಸುತ್ತಿದೆ. ಸಂಸ್ಕರಿತ ಅಡಕೆ ಒಪ್ಪಿಗೆಯಾದರೆ ಒಪ್ಪಂದ ಮಾಡಿಕೊಳ್ಳಲಾಗುವುದು.
ಭವಿಷ್ಯದಲ್ಲಿ ಚೀನಾದ ಇತರೆ ಕಂಪನಿಗಳ ಜತೆಯೂ ಒಪ್ಪಂದ ಮಾಡಿಕೊಳ್ಳಬಹುದು ಎಂದರು. ಎಳತು ಅಡಕೆ ಪಡೆದು ಅದರ ಸಿಪ್ಪೆಯನ್ನು ಮಾತ್ರ ಮೌತ್ ಫ್ರೆಶ್ನರ್ ಗೆ ಬಳಸುತ್ತಾರೆ. ಒಳಗಿನ ಅಡಕೆಯನ್ನು ಮರಳಿ ಭಾರತಕ್ಕೆ ಕಳುಹಿಸಲಿದೆ. ಅದನ್ನು ಗುಟ್ಕಾ ಕಂಪನಿಗಳಿಗೆ ರವಾನಿಸಲಾಗುವುದು. ಈ ಕಂಪನಿ 7 ವಿಧದ ಅಡಕೆ ಉತ್ಪನ್ನ ತಯಾರಿಸುತ್ತದೆ ಎಂದು ವಿವರಿಸಿದರು. ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com