ರಾಷ್ಟ್ರಗೀತೆಯಲ್ಲಿ `ಅಧಿನಾಯಕ' ಪದ ಬದಲಿಸಿ: ಕಲ್ಯಾಣ್ ಸಿಂಗ್

ರಾಷ್ಟ್ರಗೀತೆಯ ಬಗ್ಗೆ ಚಕಾರವೆತ್ತುವ ಮೂಲಕ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‍ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರಗೀತೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದರೂ, ಸದ್ಯಕ್ಕೆ ತಣ್ಣಗಿದ್ದ...
ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‍ಸಿಂಗ್
ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‍ಸಿಂಗ್

ಜೈಪುರ: ರಾಷ್ಟ್ರಗೀತೆಯ ಬಗ್ಗೆ ಚಕಾರವೆತ್ತುವ ಮೂಲಕ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‍ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರಗೀತೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದರೂ, ಸದ್ಯಕ್ಕೆ ತಣ್ಣಗಿದ್ದ ವಿವಾದವನ್ನು ಕಲ್ಯಾಣ್‍ಸಿಂಗ್ ಮಂಗಳವಾರ ಮತ್ತೆ ಬಡಿದೆಬ್ಬಿಸಿದ್ದಾರೆ.

ರಾಜಸ್ಥಾನ ವಿವಿ ಘಟಿಕೋತ್ವದಲ್ಲಿ ಭಾಗಿಯಾಗಿದ್ದ ಕಲ್ಯಾಣ್ ಸಿಂಗ್ ಅವರು, ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ರಾಷ್ಟ್ರಗೀತೆಯ `ಜನಗಣ ಮನ ಅಧಿನಾಯಕ ಜಯಹೇ...' ಸಾಲಿನಲ್ಲಿ `ಅಧಿನಾಯಕ' ಪದ ಬ್ರಿಟಿಷ್ ಅಧಿಕಾರವನ್ನು ಹೊಗಳುತ್ತದೆ. ಆದ್ದರಿಂದ ಆ ಪದವನ್ನು ತೆಗೆದುಹಾಕಿ ಅದರ ಬದಲಿಗೆ `ಮಂಗಳ'ಎಂಬ ಪದ ಬಳಸಬೇಕು. `ಜನಗಣಮನ ಮಂಗಳ ಗಾಯೆ...' ಎಂದು ಹಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

``ರವೀಂದ್ರನಾಥ್ ಟಾಗೋರ್ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಆಕ್ಷೇಪ ರಾಷ್ಟ್ರಗೀತೆಯ ಆ ಪದದ ಬಗ್ಗೆ ಮಾತ್ರ. ರಾಜ್ಯಪಾಲರನ್ನು ಮಹಾಮಹಿಮ್, ಹಿಸ್‍ಎಕ್ಸಲೆನ್ಸಿ ಎಂದು ಸಂಬೋಧಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇನೆ'' ಎಂದಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಬರ್ ಮತ್ತು ರಾಣಾಪ್ರತಾಪ್ ರನ್ನು ತುಲನೆ ಮಾಡಿ, ರಾಣಾಪ್ರತಾಪ್ ಗ್ರೇಟ್ ಎಂದು ಸುದ್ದಿ ಮಾಡಿದ್ದ ಕಲ್ಯಾಣ್‍ಸಿಂಗ್, ಆ ಮಾತುಗಳನ್ನು ಪುನರುಚ್ಚರಿಸಿ, ಔರಂಗ್‍ಜೇಬ್‍ಗಿಂತ ಶಿವಾಜಿ ಶ್ರೇಷ್ಠ, ವಿಕ್ಟೋರಿಯಾ ರಾಣಿಗಿಂತ ಝಾನ್ಸಿರಾಣಿ ಶ್ರೇಷ್ಟ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com