ಹ್ಯಾಕ್ ಆಗಿದೆ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವೆಬ್‌ಸೈಟ್‌

ಪ್ರತಿಷ್ಠಿತ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ)ಯ ವೆಬ್‌ಸೈಟ್‌ ನ್ನು ಹ್ಯಾಕ್ ಮಾಡಲಾಗಿದೆ...
ಇಸ್ರೋ ಸಂಸ್ಧೆ
ಇಸ್ರೋ ಸಂಸ್ಧೆ

ನವದೆಹಲಿ: ಪ್ರತಿಷ್ಠಿತ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ)ಯ ವೆಬ್‌ಸೈಟ್‌ ನ್ನು ಹ್ಯಾಕ್ ಮಾಡಲಾಗಿದೆ.

ಇಸ್ರೋದಿಂದ 2 ದಿನಗಳ ಹಿಂದೆ 5 ವಾಣಿಜ್ಯ ಬಳಕೆಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಾಣಿಜ್ಯ ಉದ್ದೇಶಿತ ಆ್ಯಂಟ್ರಿಕ್ಸ್ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಲಾಗಿದ್ದು, ಇದರ ಹಿಂದೆ ಚೀನಾ ಹ್ಯಾಕರ್ ಗಳ ಕೈವಾಡವಿರುವುದಾಗಿ ಶಂಕಿಸಲಾಗಿದೆ.

ಕಳೆದ ಶುಕ್ರವಾರ ರಾತ್ರಿ ಸರಿಯಾಗಿ 9.58ಕ್ಕೆ ಬ್ರಿಟನ್ 5 ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಕಳುಹಿಸಿತ್ತು.

15 ಮಹಡಿಯ ಕಟ್ಟಡದಷ್ಟು ಎತ್ತರದ ರಾಕೆಟ್  320 ಟನ್ ತೂಕವಿತ್ತು. ಈ ರಾಕೆಟ್ 1440 ಕೆಜಿ ತೂಕದ ಬ್ರಿಟಿಷ್ ಉಪಗ್ರಹಗಳನ್ನುಹೊತ್ತು ಸಾಗಿದ್ದು, ಇಷ್ಟೊಂದು ಭಾರದ ವಾಣಿಜ್ಯ ಉಡಾವಣೆ ಭಾರತದಲ್ಲಿ ಇದೇ  ಮೊದಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com