ಅಟಾರ್ನಿ ವಕಾಲತ್ತಿಗೆ ಸಿಎಂ ಚಾಂಡಿ ಆಕ್ಷೇಪ

ಸುಪ್ರೀಂ ಕೋರ್ಟ್ನಲ್ಲಿ ಬಾರ್ ಮಾಲೀಕರ ಪರ ವಾದ ಮಂಡಿಸಲು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹರಿಹಾಯ್ದಿದ್ದಾರೆ...
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
Updated on: 

ಕೊಚ್ಚಿ: ಸುಪ್ರೀಂ ಕೋರ್ಟ್ನಲ್ಲಿ ಬಾರ್ ಮಾಲೀಕರ ಪರ ವಾದ ಮಂಡಿಸಲು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹರಿಹಾಯ್ದಿದ್ದಾರೆ.

ಕೇಂದ್ರದ ಅನುಮತಿ ಪಡೆದು ಅಟಾರ್ನಿ ಜನರಲ್ ವಾದ ಮಂಡಿಸಲು ಮುಂದಾಗಿರುವುದು ಅಘಾತಕಾರಿ. ಪ್ರಧಾನಿ ಮೋದಿ ಅವರೇ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದಿದ್ದಾರೆ ಚಾಂಡಿ. ಪಂಚತಾರಾ ಬಾರ್ ಮಾಲೀಕರಿಗೆ ಮಾತ್ರ ಮದ್ಯ ಮಾರಾಟದ ಪರವಾನಗಿ ನೀಡುವ ಕೇರಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಾರ್ ಮಾಲೀಕರು ಸುಪ್ರೀಂ ಮೆಟ್ಟಿಲೇರಿದ್ದಾರೆ.

ತಾನು ಖಾಸಗಿಯಾಗಿ ಕೇರಳ ಬಾರ್ ಮಾಲೀಕರ ಪರವಾದ ಮಂಡಿಸುತ್ತೇನೆ. ಒಬ್ಬ ವಕೀಲನನ್ನು ನೋಡಿ ಕೇರಳ ಸರ್ಕಾರ ಹೆದರುತ್ತಿರುವುದೇಕೆ? ನಾನಿಲ್ಲದಿದ್ದರೆ ಬೇರೊಬ್ಬ ವಕೀಲ ವಾದ ಮಂಡಿಸುತ್ತಿದ್ದರು. ಬಾರ್ ಮಾಲೀಕರು ನನ್ನ ನೆರವು ಕೋರಿದ್ದಕ್ಕೆ ಅವರ ಪರ ವಾದಿಸಲು ನಿರ್ಧರಿಸಿದ್ದೇನೆ. ಅದರಲ್ಲಿ ಯಾವ ತಪ್ಪೂ ಇಲ್ಲ.
-ಮುಕುಲ್ ರೋಹಟಗಿ
ಅಟಾರ್ನಿ ಜನರಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com