ಉಗ್ರರ ನಂಟು ಶಂಕೆ: ಭಾರತೀಯ ಪ್ರವಾಸಿಗರ ಬಂಧಿಸಿದ ಚೀನಾ

ನಿಷೇಧಿತ ಉಗ್ರರ ಸಂಘಟನೆಯ ನಂಟು ಹೊಂದಿದ್ದಾರೆಂಬ ಶಂಕೆಯಿಂದ 20 ಭಾರತೀಯ ಪ್ರವಾಸಿಗರನ್ನು ಚೀನಾ ಸರ್ಕಾರ ಬಂಧಿಸಿರುವುದಾಗಿ ಬುಧವಾರ ತಿಳಿದುಬಂದಿದೆ...
ಚೀನಾ
ಚೀನಾ

ಬೀಜಿಂಗ್: ನಿಷೇಧಿತ ಉಗ್ರರ ಸಂಘಟನೆಯ ನಂಟು ಹೊಂದಿದ್ದಾರೆಂಬ ಶಂಕೆಯಿಂದ 20 ಭಾರತೀಯ ಪ್ರವಾಸಿಗರನ್ನು ಚೀನಾ ಸರ್ಕಾರ ಬಂಧಿಸಿರುವುದಾಗಿ ಬುಧವಾರ ತಿಳಿದುಬಂದಿದೆ.

ಭಾರತೀಯ ಪ್ರವಾಸಿಗರು 40 ದಿನಗಳ ಕಾಲ ಚೀನಾ ಪ್ರವಾಸಿಕ್ಕೆ ಹೋಗಿದ್ದು, ಚೀನಾದ ಹೋಟೆಲ್ ಉಳಿದುಕೊಂಡಿದ್ದಾರೆ. ಹೋಟೆಲ್ ರೂಮ್ ನಲ್ಲಿ ಭಾರತೀಯ ಪ್ರವಾಸಿಗರು ನಿಷೇಧಿತ ಉಗ್ರ ಸಂಘಟನೆಯ ವೀಡಿಯೋಗಳನ್ನು ವೀಕ್ಷಿಸಿದ್ದಾರೆಂದು ಆರೋಪಿಸಿ ಚೀನಾದ ಅಧಿಕಾರಿಗಳು ಭಾರತೀಯ ಪ್ರವಾಸಿಗರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಚೀನಾ ಆಡಳಿತ ಮಂಡಳಿಯು  ಹೋಟೆಲೊಂದರಲ್ಲಿ ಭಾರತೀಯ ಪ್ರವಾಸಿಗರು ನಿಷೇಧಿತ ಉಗ್ರರ ಸಂಘಟನೆಯ ವೀಡಿಯೋ ವೀಕ್ಷಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಅಧಿಕಾರಿಗಳು ಪ್ರವಾಸಿಗರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದ 20 ಭಾರತೀಯ ಪ್ರವಾಸಿಗರಲ್ಲಿ ಪ್ರಸ್ತುತ 11 ಮಂದಿಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಉಳಿದವರನ್ನು ತನಿಖೆಗೊಳಪಡಿಸಲಾಗಿದೆ ಎಂದು ಹೇಳಿದೆ.

ಚೀನಾದಲ್ಲಿ ಬಂಧಿತರಾದ ಭಾರತೀಯರ ಕುರಿತಂತೆ ವಿಚಾರ ತಿಳಿದಿಲ್ಲ. ಮಾಹಿತಿ ಪಡೆದ ನಂತರವಷ್ಟೇ ಪ್ರತಿಕ್ರಿಯೆ ನೀಡಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿದೆ.

ಮೂಲಗಳ ಪ್ರಕಾರ ಬಂಧಿತರಾದ ಭಾರತೀಯ ಪ್ರವಾಸಿಗರಲ್ಲಿ ಕೆಲವರು ಟೆಲಿಕಾಂ ಕಂಪನಿಯಾದ ವೋಡಾಕಾಮ್ ಗ್ರೂಪ್ ಲಿಮಿಟೆಡ್ ಮುಖ್ಯ ಕಾರ್ಯದರ್ಶಿಯಾಗಿರುವ ಶಮೀಲ್ ಜೂಸಬ್ ಅವರ ಸಂಬಂಧಿಗಳು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com