ಗುರ್ ಗಾಂವ್ ನ ಸೆಂಟ್ರಲ್ ಮಾಲ್ ಬಳಿ ಗುಂಡಿನ ದಾಳಿ: 1 ಸಾವು

ರೌಡಿಯೊಬ್ಬನ ಮೇಲೆ ಅನಾಮಿಕ ವ್ಯಕ್ತಿಗಳು ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿರುವ ಘಟನೆಯೊಂದು ಗುರ್ ಗಾಂವ್ ನ ಸೆಂಟ್ರಲ್ ಮಾಲ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ...
ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಆಟೋ ಮೇಲೆ ಕಾರು ಹತ್ತಿಸಿದ ಚಾಲಕ
ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಆಟೋ ಮೇಲೆ ಕಾರು ಹತ್ತಿಸಿದ ಚಾಲಕ

ಗುರ್ ಗಾಂವ್: ರೌಡಿಯೊಬ್ಬನ ಮೇಲೆ ಅನಾಮಿಕ ವ್ಯಕ್ತಿಗಳು ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿರುವ ಘಟನೆಯೊಂದು ಗುರ್ ಗಾಂವ್ ನ ಸೆಂಟ್ರಲ್ ಮಾಲ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಗುರ್ ಗಾಂವ್ ನ ಎಂಜಿ ರಸ್ತೆ ಬಳಿ ಸುವ್ (ಕ್ರೀಡಾ ಬಳಕೆಯ ವಾಹನ) ವಾಹನ ಚಾಲಕನೊಬ್ಬ ಕಾರು ನಿಲ್ಲಿಸಿದ್ದನು. ಈ ವೇಳೆ ಮತ್ತೊಂದು ಕಾರಿನಿಂದ ಬಂದ ಅನಾಮಿಕ ವ್ಯಕ್ತಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿ ಎದುರಿಗಿದ್ದ ಆಟೋ ಮೇಲೆ ತನ್ನ ಕಾರು ಹತ್ತಿಸಿದ್ದಾನೆ. ಈ ವೇಳೆ ಆಟೋದಲ್ಲಿದ್ದ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಗುಂಡಿನ ದಾಳಿಗೊಳಗಾದ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಈತನೂ ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ. ಅನಾಮಿಕ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಕಾರಿನಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದಾಗಿ ಗುರ್ ಗಾಂವ್ ನ ಎಂಜಿ ರಸ್ತೆಯ ಸುತ್ತಮುತ್ತ ವಾಹನ ದಟ್ಟನೆ ಉಂಟಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com