ಸ್ಪಷ್ಟನೆ ನೀಡುವ ಅಗತ್ಯ ಏನೂ ಇಲ್ಲ, ಹಿಂದಿನ ಆದೇಶದಲ್ಲೇ ಎಲ್ಲವೂ ಇದೆ: ಸುಪ್ರೀಂ

ಬಿಬಿಎಂಪಿ ಚುನಾವಣೆಗೆ ನೀಡಿರುವ ಕಾಲಾವಕಾಶದ ಬಗ್ಗೆ ಜುಲೈ 3ರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿರುವುದರಿಂದ ನಿಮ್ಮ ಅರ್ಜಿಗೆ ಸ್ಪಷ್ಟನೆ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ತಿಳಿಸಿದೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Updated on: 

ನವದೆಹಲಿ: ಬಿಬಿಎಂಪಿ ಚುನಾವಣೆಗೆ ನೀಡಿರುವ ಕಾಲಾವಕಾಶದ ಬಗ್ಗೆ ಜುಲೈ 3ರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿರುವುದರಿಂದ ನಿಮ್ಮ ಅರ್ಜಿಗೆ ಸ್ಪಷ್ಟನೆ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಕಾಲಾವಕಾಶ ಕುರಿತಂತೆ ಸ್ಪಷ್ಟನೆ ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠವು, ಚುನಾವಣೆ ನಡೆಸುವಂತೆ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಗೊಂದಲವೇನೂ ಇಲ್ಲ. ಹಾಗಾಗಿ ಸ್ಪಷ್ಟನೆ ನೀಡುವ ಅಗತ್ಯ ಇಲ್ಲ ಎಂದರು.

ರಾಜ್ಯ ಸರ್ಕಾರದ ಪರ ವಕೀಲರು, ಚುನಾವಣಾ ನಡೆಸುವ ಕುರಿತಂತೆ ರಾಜ್ಯ ಹೈಕೋರ್ಟ್ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸುತ್ತಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಆ ಬಗ್ಗೆ ದಾಖಲೆ ಒದಗಿಸುವಂತೆ ನ್ಯಾಯಪೀಠ ಕೇಳಿದಾಗ ತಕ್ಷಣ ದಾಖಲೆ ಒದಗಿಸಲಾಗಲಿಲ್ಲ. ಈ ಹಂತದಲ್ಲಿ, ಒಂದು ವೇಳೆ ಹೈಕೋರ್ಟ್ ನಮ್ಮ (ಸುಪ್ರೀಂಕೋರ್ಟ್) ಆದೇಶ ಉಲ್ಲಂಘಿಸಿದರೆ, ಅದನ್ನು ದಾಖಲೆಗಳ ಸಹಿತ ತೆಗೆದುಕೊಂಡು ಬನ್ನಿ, ಆ ನಂತರ ವಿಚಾರಣೆ ನಡೆಸಬಹುದು ಎಂದು ನ್ಯಾ.ಎಚ್.ಎಲ್.ದತ್ತು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com