ಉಗ್ರರ ನಂಟು ಶಂಕೆ: ಬಂಧಿತ ಭಾರತೀಯನನ್ನು ಗಡಿಪಾರು ಮಾಡಿದ ಚೀನಾ

ನಿಷೇಧಿತ ಉಗ್ರರ ಸಂಘಟನೆಯ ನಂಟು ಹೊಂದಿದ್ದಾನೆಂಬ ಶಂಕೆಯಿಂದಾಗಿ ಭಾರತೀಯ ಪ್ರವಾಸಿಗನೊಬ್ಬನನ್ನು ಬಂಧನಕ್ಕೊಳಪಡಿಸಿದ್ದ ಚೀನಾ ಇದೀಗ ಭಾರತೀಯನನ್ನು ಬಿಡುಗಡೆಗೊಳಿಸಿ ಗಡಿಪಾರು ಮಾಡಿರುವುದಾಗಿ ಶನಿವಾರ ತಿಳಿದುಬಂದಿದೆ...
ಉಗ್ರರ ನಂಟು ಶಂಕೆ: ಬಂಧಿತ ಭಾರತೀಯನನ್ನು ಗಡಿಪಾರು ಮಾಡಿದ ಚೀನಾ (ಸಾಂದರ್ಭಿಕ ಚಿತ್ರ)
ಉಗ್ರರ ನಂಟು ಶಂಕೆ: ಬಂಧಿತ ಭಾರತೀಯನನ್ನು ಗಡಿಪಾರು ಮಾಡಿದ ಚೀನಾ (ಸಾಂದರ್ಭಿಕ ಚಿತ್ರ)

ನವದೆಹಲಿ: ನಿಷೇಧಿತ ಉಗ್ರರ ಸಂಘಟನೆಯ ನಂಟು ಹೊಂದಿದ್ದಾನೆಂಬ ಶಂಕೆಯಿಂದಾಗಿ ಭಾರತೀಯ ಪ್ರವಾಸಿಗನೊಬ್ಬನನ್ನು ಬಂಧನಕ್ಕೊಳಪಡಿಸಿದ್ದ ಚೀನಾ ಇದೀಗ ಭಾರತೀಯನನ್ನು ಬಿಡುಗಡೆಗೊಳಿಸಿ ಗಡಿಪಾರು ಮಾಡಿರುವುದಾಗಿ ಶನಿವಾರ ತಿಳಿದುಬಂದಿದೆ.

ಚೀನಾದಿಂದ ಬಂಧನಕ್ಕೊಳಪಟ್ಟ ಭಾರತೀಯನನ್ನು ಆರ್.ಕೆ.ಕುಲ್ಶ್ರೇಷ್ಠ ಎಂದು ತಿಳಿದುಬಂದಿದೆ. ಬಂಧಿತ ಭಾರತೀಯನ ಬಿಡುಗಡೆ ಕುರಿತಂತೆ ಚೀನಾದ ಅಧಿಕಾರಿಗಳು ಭಾರತೀಯ ರಾಯಭಾರಿಯೊಂದಿಗೆ ಧೀರ್ಘಕಾಲದ ಚರ್ಚೆ ನಡೆಸಿ, ನಂತರ ಶುಕ್ರವಾರ ರಾತ್ರಿ ಕುಲ್ಶ್ರೇಷ್ಠರನ್ನು ಬಿಡುಗಡೆಗೊಳಿಸಿ ಚೀನಾದಿಂದ ಗಡಿಪಾರು ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಭಾರತೀಯ ರಾಯಭಾರಿ ಕಚೇರಿ, ಮಂಗೋಲಿಯಾದಲ್ಲಿ ಬಂಧನಕ್ಕೊನಕ್ಕಾಗಿದ್ದ ಭಾರತೀಯನನ್ನು ಇದೀಗ ಚೀನಾ ಬಿಡುಗಡೆಗೊಳಿಸಿದ್ದು, ಮರಳಿ ಭಾರತಕ್ಕೆ ಬರಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದೆ.

ನಿಷೇಧಿತ ಭಯೋತ್ಪಾದನೆ ಸಂಘಟನೆಗೆ ಜೊತೆ ಸಂಪರ್ಕ ಹೊಂದಿದ್ದಾರೆಂಬ ಆರೋಪದಡಿಯಲ್ಲಿ ಜು.11 ರಂದು ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ಸೇರಿ 20 ಮಂದಿ ಪ್ರವಾಸಿಗರನ್ನು ಉತ್ತರ ಚೀನಾದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಬಂಧನಕ್ಕೊಳಪಡಿಸಿದ ದಿನದಂದೇ 11 ಮಂದಿಯನ್ನು ಚೀನಾ ಬಿಡುಗಡೆಗೊಳಿಸಿ, 9 ಮಂದಿಯನ್ನು ತನ್ನ ವಶದಲ್ಲೇ ಇರಿಸಿಕೊಂಡಿತ್ತು. ಇದೀಗ ಬಂಧಿತ ಭಾರತೀಯನೊಬ್ಬ, ಐವರು ಬ್ರಿಟನ್ ದೇಶದವರು ಹಾಗೂ ಇಬ್ಬರು ದಕ್ಷಿಣ ಆಫ್ರಿಕಾ ರಾಷ್ಟ್ರದವರನ್ನು ಶುಕ್ರವಾರ ಬಿಡುಗಡೆಗೊಳಿಸಿದೆ ಎಂದು ಹೇಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com