ಯುರೇನಿಯಂ
ಯುರೇನಿಯಂ

ಯುರೇನಿಯಂ ನಿಧಿ ಸ್ಥಾಪನೆಗೆ ಕೇಂದ್ರ ಸಿದ್ಧತೆ

ದಾಖಲೆ ಪ್ರಮಾಣದಲ್ಲಿ ಯುರೇನಿಯಂ ಉತ್ಪಾದಿಸಿದ ಬೆನ್ನಲ್ಲೇ ಭಾರತವು `ವ್ಯೂಹಾತ್ಮಕ ಯುರೇನಿಯಂ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ...

ನವದೆಹಲಿ: ದಾಖಲೆ ಪ್ರಮಾಣದಲ್ಲಿ ಯುರೇನಿಯಂ ಉತ್ಪಾದಿಸಿದ ಬೆನ್ನಲ್ಲೇ ಭಾರತವು ವ್ಯೂಹಾತ್ಮಕ ಯುರೇನಿಯಂ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ.

ಪರಮಾಣು ವಿದ್ಯುತ್ ರಿಯಾಕ್ಟರ್‍ಗಳಿಗೆ ಪ್ರಮುಖವಾಗಿ ಬೇಕಾದ ಅಣು ಇಂಧನದ ಕೊರತೆ ಉಂಟಾಗಬಾರದು ಎಂಬುವುದೇ ಇದರ ಉದ್ದೇಶ. ಸರ್ಕಾರ ರಚಿಸಲುದ್ದೇಶಿಸಿರುವ ಯುರೇನಿಯಂ ನಿ„ಯಲ್ಲಿ ಸುಮಾರು 5-10 ವರ್ಷ ಕಾಲ ಉಳಿಯಬಲ್ಲ 5 ಸಾವಿರದಿಂದ 15 ಸಾವಿರ ಮೆಟ್ರಿಕ್ ಟನ್ ಯುರೇನಿಯಂ ಗ್ರಹವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

5 ಸಾವಿರ ಮೆ.ಟ. ಯುರೇನಿಯಂ ಸಂಗ್ರಹಿಸುವ ಪ್ರಸ್ತಾಪವನ್ನು ಈಗಾಗಲೇ ಸಂಪುಟದ ಒಪ್ಪಿಗೆಗಾಗಿ ಕಳುಹಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇದರ ಮಿತಿ ಇನ್ನಷ್ಟು ಹೆಚ್ಚಲಿದೆ ಎಂದೂ ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com