ಮೋದಿ ಭ್ರಷ್ಟಾಚಾರದ 'ಚೌಕಿಧಾರ': ಕಾಂಗ್ರೆಸ್

ನರೇಂದ್ರ ಮೋದಿ ಅವರು ಭ್ರಷ್ಟರ ವಿಷಯದಲ್ಲಿ ಏನನ್ನೂ ಮಾಡದೆ ಭ್ರಷ್ಟಾಚಾರದ ಚೌಕೀಧಾರ (ಕಾಯುವವನು) ಆಗಿದ್ದಾರೆ ಎಂದು ಕಾಂಗ್ರೆಸ್ ದೂಷಿಸಿದೆ.
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್
Updated on: 

ನವದೆಹಲಿ: ನರೇಂದ್ರ ಮೋದಿ ಅವರು ಭ್ರಷ್ಟರ ವಿಷಯದಲ್ಲಿ ಏನನ್ನೂ ಮಾಡದೆ ಭ್ರಷ್ಟಾಚಾರದ ಚೌಕೀಧಾರ (ಕಾಯುವವನು) ಆಗಿದ್ದಾರೆ ಎಂದು ಕಾಂಗ್ರೆಸ್ ದೂಷಿಸಿದೆ.

ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮೊದಲು, ತಮ್ಮ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು ಕೂಡ ಭ್ರಷ್ಟರನ್ನು ಹೊರಗಟ್ಟುವುದಾಗಿ ಹೇಳಿಕೊಂಡಿದ್ದರು ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಸಂಸತ್ ಮುಂಗಾರು ಅಧಿವೇಶನಕ್ಕೂ ಮುಂಚಿತವಾಗಿ ಪತ್ರಕರ್ತರಿಗೆ ತಿಳಿಸಿದ್ದಾರೆ.

"ಅವರು (ಮೋದಿ) ದೇಶದ ಆಸ್ತಿಯ ಚೌಕೀಧಾರ ಎಂದು ಹೇಳಿದ್ದರು ಮತ್ತು ಅದನ್ನು ಭ್ರಷ್ಟಾಚಾರದಿಂದ ಕದಿಯಲು ಯಾರಿಗೂ ಬಿಡುವುದಿಲ್ಲ ಎಂದಿದ್ದರು. ಆದರೆ ಈಗ ಅವರು ಭ್ರಷ್ಟಾಚಾರವನ್ನು ಕಾಯುತ್ತಿರುವ 'ಚೌಕೀಧಾರ'ನಾಗಿದ್ದಾರೆ" ಎಂದು ಸಿಬಲ್ ಆರೋಪಿಸಿದ್ದಾರೆ.

ಸರ್ಕಾರ ನೇಮಿಸಿರುವ ಹೊಸ ಮುಖಗಳು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿದ್ದಾರೆ.

"ತಮ್ಮ ಹಿಂದಿನ ಯುಪಿಎ ಸರ್ಕಾರಕ್ಕಿಂದಲೂ ದ್ವಿಪಟ್ಟು ಹೆಚ್ಚಿನ ಕ್ರಿಮಿನಲ್ ಅಪರಾಧ ಎದುರಿಸುತ್ತಿರುವ ಸಚಿವರಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಚೈನಾಗೆ ಸಂಬಂಧಿಸಿದಂತೆ ವಿದೇಶಾಂಗ ನೀತಿಯ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ಅಲ್ಲದೆ ತನ್ನ ವಿದೇಶಾಂಗ ನೀತಿಯಲ್ಲಿ ಆಫ್ರಿಕಾ ಮತ್ತು ಪಶ್ಚಿಮ ಏಶಿಯಾ ದೇಶಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸಂಸತ್ ಅಧಿವೇಶನ ಅಡ್ಡಿಪಡಿಸುವುದರ ಬಗ್ಗೆ ಉತ್ತರಿಸಿದ ಕಪಿಲ್, ಬಿಜೆಪಿ ಪಕ್ಷ ವಿರೋಧಪಕ್ಷವಾಗಿದ್ದಾಗ ಅಡ್ಡಿಪಡಿಸುವುದು ಸಂಸತ್ ತಂತ್ರ ಎನ್ನುತ್ತಿದ್ದರು ಆದರೆ ಈಗ ಅವರು ವಿರುದ್ಧವಾಗಿ ಚಿಂತಿಸುತ್ತಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com