

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ ಬೆನ್ನಲ್ಲೇ ಅಧಿವೇಶನದ ಮುಂದೆ ಕೈಗೊಳ್ಳಬೇಕಿದ್ದ ಶಾಂತ ಪ್ರತಿಭಟನೆಯನ್ನು ಕಾಂಗ್ರೆಸ್ ಮುಂದೂಡಿದೆ.
ಲಲಿತ್ ಮೋದಿಗೆ ವಿಸಾ ಕೊಡಿಸಿದ ಆರೋಪದಡಿ ಸುಷ್ಮಾ ಸ್ವರಾಜ್, ವಸುಂಧರೇ ರಾಜೆ ರಾಜಿನಾಮೆಗೆ ಆಗ್ರಹಿಸಿ ಇಂದು ನಡೆಯುವ ಕಲಾಪದ ವೇಳೆ ಅಧಿವೇಶನದ ಮುಂದೆ ಶಾಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು.
ಇದಕ್ಕೆ ತಿರುಗೇಟು ನೀಡುವಂತೆ ಸುಷ್ಮಾ ಸ್ವರಾಜ್ ಅವರು ಬಹುಕೋಟಿ ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿ ಸಂತೋಷ್ ಬರ್ಗೋಡಿಯಾಗೆ ತುರ್ತು ಪಾಸ್ ಪೋರ್ಟ್ ನೀಡಲು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಒತ್ತಡ ಹೇರಿದ್ದರು. ಅವರ ಹೆಸರನ್ನು ಸಂಸತ್ ನಲ್ಲಿ ಬಹಿರಂಗಪಡಿಸುತ್ತೇನೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
ಟ್ವೀಟ್ ಸುದ್ದಿ ಹರಿದಾಡುತ್ತಿದ್ದಂತೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ ಶಾಂತ ಪ್ರತಿಭಟೆಯನ್ನೂ ಮುಂದೂಡಲಾಗಿದೆ.