ಇನ್ನು ರೈಲಲ್ಲೂ ಸಿಗುತ್ತೆ ಕೆಎಫ್ ಸಿ ಊಟ

ಭಾರತೀಯ ರೈಲ್ವೆ ಇಲಾಖೆಯ ಅಧೀನ ಸಂಸ್ಥೆಯಾದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಂಪನಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಅಧೀನ ಸಂಸ್ಥೆಯಾದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಂಪನಿ (ಐಆರ್ ಸಿಟಿಸಿ) ಜೊತೆ ಕೆಂಟಕಿ ಫ್ರೈಡ್ ಚಿಕನ್ (ಕೆಎಫ್ ಸಿ) ಒಪ್ಪಂದ ಮಾಡಿಕೊಂಡಿದ್ದು ಇನ್ನು ಮುಂದೆ ರೈಲುಗಳಲ್ಲಿಯೂ ಕೆಎಫ್ ಸಿ ಆಹಾರ ಉತ್ಪನ್ನಗಳು ಲಭ್ಯವಾಗಲಿವೆ.

ಈಗ ರೈಲು ಪ್ರಯಾಣಿಕರು ಕೆಎಫ್ ಸಿ ಊಟಕ್ಕೆ ಆರ್ಡರ್ ಮಾಡಬಹುದು. ಐಆರ್‍ಸಿಟಿಸಿನಲ್ಲಿ ಟಿಕೆಟ್ ಕಾಯ್ದಿರಿಸುವಾಗ ಇ-ಕ್ಯಾಟರಿಂಗ್ ಸೇವೆಗಳ ಮೂಲಕ ಆರ್ಡರ್ ಮಾಡಬಹುದು ಎಂದು ಕಂಪನಿ ಹೇಳಿದೆ.

ಸದ್ಯಕ್ಕೆ ಈ ಸೌಲಭ್ಯ ದೆಹಲಿಯಿಂದ ಹೊರಡುವ 12 ರೈಲುಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ಹತ್ತು ದಿನಗಳಲ್ಲಿ ವಿಶಾಖಪಟ್ಟಣಂ, ಹೈದರಾಬಾದ್ ಮತ್ತು ಬೆಂಗಳೂರಿನ ರೈಲುಗಳಿಗೆ ವಿಸ್ತರಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com