ಊಟದ ಬಿಲ್‍ನಲ್ಲಿ ಸೇವಾ ಶುಲ್ಕ ಸೇರಿದ್ದಕ್ಕೆ ದೂರು

ಊಟದ ಬಿಲ್‍ನಲ್ಲಿ ಅನವಶ್ಯಕವಾಗಿ ಸೇವಾ ಶುಲ್ಕ ಸೇರಿಸಿದ ಹೊಟೇಲ್ ವಿರುದ್ಧ ವಕೀಲನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ...
ಅಭಿಷೇಕ್ ನಕಾಶೆ(ಫೋಟೋ ಕೃಪೆ: ಮಿಡ್ ಡೇ)
ಅಭಿಷೇಕ್ ನಕಾಶೆ(ಫೋಟೋ ಕೃಪೆ: ಮಿಡ್ ಡೇ)

ಮುಂಬೈ: ಊಟದ ಬಿಲ್‍ನಲ್ಲಿ ಅನವಶ್ಯಕವಾಗಿ ಸೇವಾ ಶುಲ್ಕ ಸೇರಿಸಿದ ಹೊಟೇಲ್ ವಿರುದ್ಧ ವಕೀಲನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ.

ಮುಂಬೈನ ಹೊರವಲಯದ ಮುಲುಂದ್‍ನ ವಕೀಲ ಅಭಿಷೇಕ್ ನಕಾಶೆ ತಮ್ಮ ಸೋದರಿಯೊಂದಿಗೆ ಜು.18ರಂದು ರೆಸ್ಟಾರೆಂಟ್‍ಗೆ ಊಟಕ್ಕೆ ತೆರಳಿದ್ದರು. ಬಳಿತ ಸಿಬ್ಬಂದಿ ರು.525 ನ ಬಿಲ್ ತಂದು ಅಭಿಷೇಕ್‍ಗೆ ನೀಡಿದ. ಬಿಲ್‍ನಲ್ಲಿ ರು.39ಗಳನ್ನು ಸೇವಾ ಶುಲ್ಕ ಎಂದು ಸೇರಿಸಲಾಗಿತ್ತು. ಇದರ ವಿರುದ್ಧ ಅಭಿಷೇಕ್ ಮಾತಿಗಿಳಿದಿದ್ದ. ಕೊನೆಗೆ ತನ್ನ ಸೋದರಿಯೊಂದಿಗೆ ತೆರಳಿ ಮುಲಂದ್ ನ ಠಾಣೆಯಲ್ಲಿ ಅನಗತ್ಯವಾಗಿ ಸೇವಾ ಶುಲ್ಕ ವಿಧಿಸಿದ ಕುರಿತು ದೂರು ದಾಖಲಸಿದ್ದಾರೆ. 

ಈ ಕುರಿತು ಅಭಿಷೇಕ್ ಹೇಳುವುದು  ಹೀಗೆ...'ಹೊಟೇಲ್‍ಗಳು ಸೇವಾ ಶುಲ್ಕ ರೂಪದಲ್ಲಿ ವಂಚನೆ ಮಾಡುತ್ತವೆ. ಕಾನೂನು ಪ್ರಕಾರ ಸೇವಾ ಶುಲ್ಕ ವಿಧಿಸುವ ಹೊಟೇಲ್ ಗಳು ಪದಾರ್ಥಗಳ ದರದೊಂದಿಗೆ ಸೇವಾ ಶುಲ್ಕವನ್ನೂ ಸೇರಿಸಿ ಮೆನು ಕಾರ್ಡ್‍ನಲ್ಲಿ ಪ್ರದರ್ಶಿಸಬೇಕು. ಈ ರೆಸ್ಟೋರಾಂಟ್‍ನ ಮೆನುವಿನಲ್ಲಿ ವಂಚನೆ ಅಡಗಿದೆ'' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com