ಸಲ್ಲು ಗುದ್ದೋಡು ಪ್ರಕರಣ: ಮುಂಬೈ-ದೆಹಲಿಗೆ ವರ್ಗಾವಣೆ ಅರ್ಜಿ ವಜಾ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗುದ್ದೋಡು ಪ್ರಕರಣವನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ...
ಬಾಲಿವುಡ್ ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
ಬಾಲಿವುಡ್ ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗುದ್ದೋಡು ಪ್ರಕರಣವನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.

2002ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ಅಮಾಯಕರ ಸಾವಿಗೆ ಕಾರಣವಾಗಿದ್ದ ನಟ ಸಲ್ಮಾನ್ ಖಾನ್ ಪ್ರಕರಣ ಸತತ 13 ವರ್ಷಗಳ ಕಾಲ ವಿಚಾರಣೆಗೊಳಪಟ್ಟು ಕಳೆದ ಮೇ.6 ರಂದು ಸೆಷನ್ಸ್ ಕೋರ್ಟ್ ನಿಂದ ತೀರ್ಪು ಹೊರಬಿದ್ದಿತ್ತು. ತೀರ್ಪಿನಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಾಲಯವು ಕಾಯಂ ಜಾಮೀನು ನೀಡಿತ್ತು.

ಸೆಷನ್ಸ್ ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನಗೊಂಡ ಪ್ರಕರಣ ಸಂಬಂಧ ಘಟನೆ ವೇಳೆ ಗಾಯಗೊಂಡಿದ್ದ ಮುಂಬೈ ಪೊಲೀಸ್ ಪೇದೆಯೊಬ್ಬರ ತಾಯಿ. ಸಲ್ಮಾನ್ ಖಾನ್ ಅವರ ಕಾಯಂ ಜಾಮೀನನ್ನು ರದ್ದು ಮಾಡಿ, ಪ್ರಕರಣವನ್ನು ಮುಂಬೈ ನಿಂದ ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಅರ್ಜಿಯೊಂದನ್ನು ದಾಖಲಿಸಿದ್ದರು.

ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದು, ವಿಚಾರಣೆಯನ್ನು ಜುಲೈ.30ಕ್ಕೆ ಮುಂದೂಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com