ಎಚ್‍ಐವಿ ಸಂಶೋಧಕಿ ಸುನಿತಿ ಸೊಲೊಮನ್ ನಿಧನ

ಎಚ್‍ಐವಿ ಸೋಂಕು ಭಾರತಕ್ಕೂ ಪ್ರವೇಶಿಸಿದೆ ಎಂಬುದನ್ನು 1986ರಲ್ಲಿ ಮೊತ್ತ ಮೊದಲ ಬಾರಿಗೆ ಘೋಷಿಸಿದ ಎಚ್‍ಐವಿ ಸಂಶೋಧಕಿ ಡಾ. ಸುನಿತಿ ಸೊಲೊಮನ್(76) ಮಂಗಳವಾರ ಚೆನ್ನೈನಲ್ಲಿ ನಿಧನರಾದರು.
ಡಾ.ಸುನಿತಿ ಸೊಲೊಮನ್
ಡಾ.ಸುನಿತಿ ಸೊಲೊಮನ್

ಚೆನ್ನೈ: ಎಚ್‍ಐವಿ ಸೋಂಕು ಭಾರತಕ್ಕೂ ಪ್ರವೇಶಿಸಿದೆ ಎಂಬುದನ್ನು 1986ರಲ್ಲಿ ಮೊತ್ತ ಮೊದಲ ಬಾರಿಗೆ ಘೋಷಿಸಿದ ಎಚ್‍ಐವಿ ಸಂಶೋಧಕಿ ಡಾ. ಸುನಿತಿ ಸೊಲೊಮನ್(76) ಮಂಗಳವಾರ  ಚೆನ್ನೈನಲ್ಲಿ ನಿಧನರಾದರು.

ಯಕೃತ್ತಿನ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು ಕಳೆದ 2 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ವೈ. ಆರ್. ಗಾಯ್ಟೊಂಡೆ ಸೆಂಟರ್  ಫಾರ್ ಏಡ್ಸ್ ರಿಸರ್ಚ್ ಆ್ಯಂಡ್ ಎಜುಕೇಷನ್(ವೈಆರ್‍ಸಿ ಕೇರ್)ನ ಗಣೇಶ್ ಮತ್ತು ಕೃಷ್ಣನ್ ಮಾಹಿತಿ ನೀಡಿದ್ದಾರೆ. ಡಾ. ಸುನಿತಿ ಸೊಲೊಮನ್ ಚೆನ್ನೈನ ಮೊದಲ ಎಚ್‍ಐವಿ/ಏಡ್ಸ್ ಪರೀಕ್ಷೆ ಮತ್ತು  ಕೌನ್ಸೆಲಿಂಗ್ ಕೇಂದ್ರ ವೈಆರ್‍ಸಿ ಕೇರ್‍ನ ಸಂಸ್ಥಾಪಕ ನಿರ್ದೇಶಕರಾಗಿದ್ದರು.

1986ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಎಚ್‍ಐವಿ ಸೋಂಕು ಪ್ರವೇಶಿಸಿರುವುದನ್ನು ಪತ್ತೆಹಚ್ಚಿದ್ದೇ ಸುನಿತಿ ನೇತೃತ್ವದ ಸಂಶೋಧಕರ ತಂಡ. ಚೆನ್ನೈನ 6 ಮಂದಿ ಲೈಂಗಿಕ ಕಾರ್ಯ ಕರ್ತೆಯರಲ್ಲಿ ಎಚ್‍ಐವಿ ಸೋಂಕು ಪತ್ತೆಯಾ ಗಿದೆ ಎಂದು ಸುನಿತಿ ವರದಿ ನೀಡಿದ್ದರು. ಮೊದಲಿಗೆ ಈ ಸೋಂಕಿತರ ರಕ್ತರ ಮಾದರಿಯನ್ನು ವೆಲ್ಲೂರ್‍ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿತ್ತು. ನಂತರ ಅಮೆರಿಕದ ಕೇಂದ್ರ ಕ್ಕೆ ಕಳುಹಿಸಲಾಯಿತು. ಅಲ್ಲೂ ಪಾಸಿಟಿವ್ ಎಂದೇ ವರದಿ ಬಂತು.

ಇದು ವೈದ್ಯಕೀಯ ಮತ್ತು ಅರೆವೈದ್ಯಕೀಯ ತಜ್ಞರನ್ನು ಎಚ್ಚರಗೊಳ್ಳುವಂತೆ ಮಾಡಿತು. ಎಲ್ಲರೂ ಸೋಂಕಿನ ಬಗ್ಗೆ, ಚಿಕಿತ್ಸೆ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಿದರು. ಸುನಿತಿ ಮದ್ರಾಸ್  ವೈದ್ಯ ಕಾಲೇಜಿನಲ್ಲಿ ಮೈಕ್ರೋಬಯಾಲಜಿ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಎಚ್‍ಐವಿ ಸಂಶೋಧನಾ ವಲಯಕ್ಕೆ ಕಾಲಿಡಲು ವೈದ್ಯರೆಲ್ಲರೂ ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ  ಧೈರ್ಯದಿಂದ ಮುನ್ನುಗ್ಗಿದ ಸುನಿತಿ ಅವರನ್ನು ಎಲ್ಲರೂ ಡಾಕ್ಟರ್ ಎಂದೇ ಕರೆಯುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com