
ಪುಣೆ: ಪುಣೆಯ ಫಿಲಂ ಆ್ಯಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್ ಟಿಐಐ)ದ ವಿದ್ಯಾರ್ಥಿಗಳ ಪ್ರತಿಭಟನೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಎಫ್ ಟಿಐಐ ಆಡಳಿತ ಮಂಡಳಿಯ ಮುಖ್ಯಸ್ಥರನ್ನಾಗಿ ಗಜೇಂದ್ರ ಸಿಂಗ್ ಚೌಹಾಣ್‍ರನ್ನು ನೇಮಕ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. ಶುಕ್ರವಾರ ಪುಣೆಯ ಎಫ್ ಟಿಐಐ ಸಂಸ್ಥೆಗೆ ಆಗಮಿಸಿದ ರಾಹುಲ್, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಪ್ರಧಾನಿ ಮೋದಿ, ಬಿಜೆಪಿ, ಆರೆಸ್ಸೆಸ್ ವಿರುದ್ಧವೂ ಹರಿಹಾಯ್ದರು. ``ನೀವು ನಾವು ಹೇಳಿದ್ದನ್ನು ಒಪ್ಪಿದರೆ ಸರಿ, ಇಲ್ಲದಿದ್ದರೆ ಬಿಡುವುದಿಲ್ಲ'' ಎಂಬುದು ಕೇಂದ್ರ ಸರ್ಕಾರದ ವರ್ತನೆಯ ಶೈಲಿ. ಜನರ ಬಾಯಿ ಮುಚ್ಚಿಸುವ ಸಲುವಾಗಿ ಅವರು ನಿಮ್ಮನ್ನು ದೇಶವಿರೋಧಿಗಳು, ಹಿಂದೂ ವಿರೋಧಿಗಳು ಎಂಬ ಪಟ್ಟ ಕಟ್ಟಿಬಿಡುತ್ತಾರೆ ಎಂದೂ ರಾಹುಲ್ ಹೇಳಿದರು.
ರಾಹುಲ್ ಹೇಳಿದ್ದೇನು?
-ಆರೆಸ್ಸೆಸ್ ಮತ್ತು ಅಂಗಸಂಸ್ಥೆಗಳು ಎಲ್ಲದರಲ್ಲೂ ಮಧ್ಯಪ್ರವೇಶ ಮಾಡುತ್ತಿವೆ. ಹೇಗೆ ಒಂದಿಡೀ ಸರ್ಕಾರ 250 ವಿದ್ಯಾರ್ಥಿಗಳನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ ಎಂಬ ಈ ಈ ಘಟನೆಯನ್ನಿಟ್ಟುಕೊಂಡೇ ಸುಂದರ ಸಿನಿಮಾ ನಿರ್ಮಾಣ ಮಾಡಬಹುದು.
-ಇದು ಕೇವಲ ಎಫ್ ಟಿಐಐನಲ್ಲಿ ಮಾತ್ರವಲ್ಲ, ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳಲ್ಲೂ ನಡೆಯುತ್ತಿವೆ. ನಿಮ್ಮೊಂದಿಗೆ ಹೋರಾಡಲು ನಾನು ಸದಾ ಸಿದ್ಧ.
ನಟಿ ರಮ್ಯಾ ಭಾಗಿ
ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ನಟಿ, ಕಾಂಗ್ರೆಸ್‍ನ ಮಾಜಿ ಸಂಸದೆ ರಮ್ಯಾ ಅವರೂ ಎಫ್ ಟಿಐಐಗೆ ತೆರಳಿದ್ದರು. ರಾಹುಲ್ ಗಾಂಧಿ ಹಾಗೂ ವಿದ್ಯಾರ್ಥಿಗಳ ನಡುವಿನ ಸಮಾಲೋಚನೆ ಪೂರ್ಣಗೊಳ್ಳುವವರೆಗೂ ರಮ್ಯಾ ಅವರು ಅಲ್ಲೇ ಇದ್ದದ್ದು ವಿಶೇಷ.
ಗಜೇಂದ್ರ ಚೌಹಾಣ್‍ರಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕಾಣುವ ವಿದ್ಯಾರ್ಥಿಗಳು ರಾಹುಲ್ ಗಾಂಧಿಯಲ್ಲಿ ಏನನ್ನು ಕಾಣುತ್ತಿದ್ದಾರೆ? ಚಿತ್ರ ನಿರ್ದೇಶಕನನ್ನೇ?
- ಪರೇಶ್ ರಾವಲ್
ಬಿಜೆಪಿ ನಾಯಕ ನಾವೇ ರಾಹುಲ್ ಹಾಗೂ ಇತರೆ ಸಂಸದರಿಗೆ ಪತ್ರ ಬರೆದು, ನಮ್ಮ ಬೇಡಿಕೆಯನ್ನು ಸಂಸತ್‍ವರೆಗೆ ಕೊಂಡೊಯ್ಯುವಂತೆ ಮನವಿ ಮಾಡಿದ್ದೆವು. ನಾವು ಮತ್ತೊಮ್ಮೆ ರಾಹುಲ್ ಮುಂದೆ ಇದೇ ಬೇಡಿಕೆ ಮುಂದಿಡುತ್ತಿದ್ದೇವೆ.
-ಅಜಯನ್ ಆದತ್
ಎಫ್ ಟಿಐಐ ವಿದ್ಯಾರ್ಥಿ ಸಂಘದ ಪ್ರತಿನಿಧಿ
Advertisement