ಸಿಎಂ ಕುರ್ಚಿ ಆಯ್ತು, ಈಗ ಮಾವಿನ ಹಣ್ಣಿಗಾಗಿ ಮಾಂಝಿ-ನಿತಿಶ್ ಫೈಟ್

ಬಿಹಾರ ಮುಖ್ಯಮಂತ್ರಿಗಳ ನಿವಾಸ ಈಗ ಹೊಸ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡಿದ್ದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ - ನಿತೀಶ್ ಕುಮಾರ್
ಜಿತನ್ ರಾಮ್ ಮಾಂಝಿ - ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿಗಳ ನಿವಾಸ ಈಗ ಹೊಸ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡಿದ್ದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹಾಗೂ  ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗ ಮಾವು ಹಾಗೂ ಲಿಚಿ ಹಣ್ಣುಗಳಿಗಾಗಿ ಫೈಟ್ ಮಾಡುತ್ತಿದ್ದಾರೆ.

ಮಾಂಝಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೇ ವಾಸವಾಗಿದ್ದಾರೆ. ಈ ನಿವಾಸದ ಬಳಿ ಹಲವು ಮಾವು ಹಾಗೂ ಲಿಚಿ ಹಣ್ಣಿನ ಮರಗಳಿವೆ. ಆದರೆ ಮಾವು ತಿನ್ನಲು ಬಿಹಾರ ಸರ್ಕಾರ ಬಿಡುತ್ತಿಲ್ಲ ಎಂಬುದ ಮಾಂಝಿಯ ಅಳಲು.

ತಾವು ಹಾಗೂ ತಮ್ಮ ಕುಟುಂಬ ಮಾವು ಹಾಗೂ ಲಿಚಿ ಹಣ್ಣುಗಳನ್ನು ಕೀಳದಂತೆ ತಡೆಯಲು ನಿತಿಶ್ ಕುಮಾರ್ ಸರ್ಕಾರ 24 ಪೊಲೀಸರನ್ನು ನೇಮಕ ಮಾಡಿದೆ ಎಂದು ಮಾಂಝಿ ಆರೋಪಿಸಿದ್ದಾರೆ.

ಮಾಂಝಿ ಅವರ ಈ ಆರೋಪ ಕೇಳಿ ನಕ್ಕಿರುವ ನಿತಿಶ್ ಕುಮಾರ್, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪೊಲೀಸ್ ಮುಖ್ಯಸ್ಥ ಪಿ.ಕೆ.ಠಾಕೂರ್ ಅವರಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.

7 ಸರ್ಕ್ಯುಲರ್ ರಸ್ತೆಯಲ್ಲಿರುವ  ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಪ್ರದೇಶದಲ್ಲಿನ ನೂರಾರು ಮಾವಿನ ಮರಗಳನ್ನು ಹಾಗೂ ಲಿಚಿ ಹಣ್ಣುಗಳ ಕಾವಲಿಗಾಗಿ 8 ಸಬ್ ಇನ್ಸ್ ಪೆಕ್ಟರ್ಸ್ಸ್ ಹಾಗೂ 16 ಕಾನ್ಸ್ ಸ್ಟೇಬಲ್ಸ್ ಗಳನ್ನು ನೇಮಕ ಮಾಡಲಾಗಿದೆ ಎಂದು ಮಾಂಝಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com