ಮಣಿಪುರ ದಾಳಿಗೆ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರ ಬಳಕೆ

ಅಮೆರಿಕ ನಿರ್ಮಿತ ರಾಕೆಟ್ ಉಡಾವಣೆ ಅಸ್ತ್ರವನ್ನು ಬಳಸಿ ಉಗ್ರರು ಗುರುವಾರ ಚಂದೇಲ್‍ನಲ್ಲಿ ಬೆಂಗಾವಲು ಪಡೆಯ ಯೋಧರ ಮೇಲೆ ದಾಳಿ ನಡೆಸಿದ್ದರು ಎಂದು...
ಮಣಿಪುರದಲ್ಲಿ ಯೋಧರು
ಮಣಿಪುರದಲ್ಲಿ ಯೋಧರು
Updated on: 

ಇಂಫಾಲ: ಅಮೆರಿಕ ನಿರ್ಮಿತ ರಾಕೆಟ್ ಉಡಾವಣೆ ಅಸ್ತ್ರವನ್ನು ಬಳಸಿ ಉಗ್ರರು ಗುರುವಾರ ಚಂದೇಲ್‍ನಲ್ಲಿ ಬೆಂಗಾವಲು ಪಡೆಯ ಯೋಧರ ಮೇಲೆ ದಾಳಿ ನಡೆಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಮಣಿಪುರದಲ್ಲಿ ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸಲು ಯೋಧರು ಸಂಪೂರ್ಣ ಸನ್ನದ್ಧ ರಾಗಿದ್ದಾರೆ.ಮಣಿಪುರದ  ಇಂಫಾಲದಲ್ಲಿ ಗುರುವಾರ ಗಸ್ತುಪಡೆಯ ಮೇಲೆ ಹಠಾತ್ ದಾಳಿ ನಡೆಸಿದ ಉಗ್ರರ ಗುಂಪು 18 ಮಂದಿಯನ್ನು ಹತ್ಯೆ ಮಾಡಿದ್ದರು. ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಇಂಫಾಲ್‍ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡು ಟ್ರಕ್‍ಗಳಲ್ಲಿ ಬಂದ ಸುಮಾರು 50 ಮಂದಿ ಉಗ್ರರು ಅಮೆರಿಕ ನಿರ್ಮಿತ ರಾಕೆಟ್ ಉಡಾವಣೆ ಯನ್ನು ಬಳಸಿ ಯೋಧರ ಮೇಲೆ ದಾಳಿ ನಡೆಸಿದ್ದರು. ದಾಳಿಕೋರರು ಈಗಾಗ ಲೇ ಗಡಿಯನ್ನು ದಾಟಿರುವ ಶಂಕೆಯ ನ್ನು ಭದ್ರತಾ ಪಡೆಗಳು ವ್ಯಕ್ತಪಡಿಸಿವೆ. ಈ ನಡುವೆ, ಉಗ್ರರನ್ನು ಸೆರೆಹಿಡಿ ಯಲು ಯೋಧರು ಕಾರ್ಯಾಚರಣೆ ಆರಂಭಿಸಿದ್ದಾರೆ. ಪರಲಾಂಗ್, ಚರೊಂಗ್, ಮೊಲ್ಟುಹ್ ಹಾಗೂ ಇತರಕೆಲ ಪ್ರದೇಶಗಳಲ್ಲಿ
ಉಗ್ರರಿಗಾಗಿ ಸೇನಾಪಡೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com