ಶಂಕಿತ ಉಗ್ರನ ಮಾಹಿತಿ ಹಂಚಿಕೊಂಡ ಮಲೇಷ್ಯಾ

ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಮತ್ತು ಚೆನ್ನೈನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಶ್ರೀಲಂಕಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಮತ್ತು ಚೆನ್ನೈನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಶ್ರೀಲಂಕಾ ಪ್ರಜೆಯ ತನಿಖಾ ವಿವರವನ್ನು ಮಲೇಷ್ಯಾ ಸರ್ಕಾರವು ಭಾರತದೊಂದಿಗೆ ಹಂಚಿಕೊಂಡಿದೆ.

ಮೊಹಮ್ಮದ್ ಹುಸೇನ್ ಮೊಹಮ್ಮದ್ ಸುಲೈಮಾನ್ ಎಂಬಾತ ಬೆಂಗಳೂರು ಹಾಗೂ ಚೆನ್ನೈಗೆ ಇಬ್ಬರು ಆತ್ಮಾಹುತಿ ಬಾಂಬರ್‍ಗಳನ್ನು ಕಳುಹಿಸಿ ರಾಯಭಾರ ಕಚೇರಿಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಎಂಬ ವಿಚಾರ ಮಲೇಷ್ಯಾ ಹಂಚಿಕೊಂಡ ವರದಿಯಲ್ಲಿದೆ.

2012ರಲ್ಲಿ ಸಹಿ ಹಾಕಲಾದ ಪರಸ್ಪರ ಕಾನೂನಾತ್ಮಕ ಸಹಕಾರ ಒಪ್ಪಂದದ ಅನ್ವಯ ಆರೋಪಿಯ ಬಗೆಗಿನ ವಿವರ ಒದಗಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಮಲೇಷ್ಯಾ ಸರ್ಕಾರವನ್ನು ಕೋರಿಕೊಂಡಿತ್ತು. ಅದರಂತೆ, ಮಲೇಷ್ಯಾ ಉಗ್ರನಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com