ದೆಹಲಿ ಕಾನೂನು ಸಚಿವ ಜಿತೇಂದ್ರ ತೋಮರ್ ಅರೆಸ್ಟ್

ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ದೆಹಲಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರನ್ನು ಬಂಧಿಸಲಾಗಿದೆ....
ಜಿತೇಂದ್ರ ಸಿಂಗ್ ತೋಮರ್
ಜಿತೇಂದ್ರ ಸಿಂಗ್ ತೋಮರ್

ನವದೆಹಲಿ: ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ದೆಹಲಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ನಿನ್ನೆ ರಾತ್ರಿ ಎಫ್ ಐ ಆರ್ ದಾಖಲಿಸಿದ್ದರ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪೊಲೀಸರು ತೋಮರ್ ಅವರನ್ನು ಬಂಧಿಸಲಾಗಿದೆ.
 ತೋಮರ್ ಬಂಧನಕ್ಕೆ ಆಪ್ ನಾಯಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯಾವುದೇ ನೋಟಿಸ್  ನೀಡದೇ ಸಚಿವರನ್ನು ಬಂಧಿಸಲಾಗಿದೆ. ಆಪ್ ಸರ್ಕಾರದ ಮೇಲೆ ಒತ್ತಡ ಹೇರಲು ಕೇಂದ್ರ ನಾಯಕರು ಈ ಕುತಂತ್ರ ಅನುಸರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬಂಧಿಸುವ ಮುನ್ನ ಪೊಲೀಸರು ನೋಟೀಸ್ ನೀಡಬೇಕಿತ್ತು. ಕೇಂದ್ರ ಸರ್ಕಾರದ ಅಣತಿಯಂತೆ ಪೊಲೀಸರ ಕ್ರಮ ತೆಗೆದು ಕೊಂಡಿದ್ದಾರೆ. ಪೊಲೀಸರು ಕೇಂದ್ರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಜಿತೇಂದ್ರ ತೋಮರ್ ಆರೋಪಿಸಿದ್ದಾರೆ. ಆಪ್  ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮಾಡಿರುವ ಕುತಂತ್ರ ಇದು ಎಂದು ತೋಮರ್ ದೂರಿದ್ದಾರೆ.

ಇನ್ನು ತೋಮರ್ ಪ್ರಕರಣ ಹೈಕೋರ್ಟ್ ನಲ್ಲಿದ್ದು ಈಗ ಅವರನ್ನು ಬಂಧಿಸಿರುವುದು ದೆಹಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಲೆಪ್ಟಿನೆಂಟ್ ಗವರ್ನರ್ ಷಡ್ಯಂತ್ರ. ಯಾರು ಏನೇ ಮಾಡಿದರೂ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುದುವರಿಯುತ್ತದೆ ಎಂದು ಆಪ್ ಮುಖಂಡರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಯಾವುದೋ ಮೀಟಿಂಗ್ ಸಂಬಂಧ ನಾನು ಹೊರ ಹೊಗಿದ್ದೆ. ಪ್ರಕರಣದ ಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಯಿಸುವುದಾಗಿ ಅವರು ತಿಳಿಸಿದ್ದಾರೆ.

ತೋಮರ್ ಕಾನೂನು ಪದವಿ ನಕಲಿ ಪಮಾಣ ಪತ್ರ ನೀಡಿದ್ದಾರೆಂದು ದೆಹಲಿ ಬಾರ್ ಕೌನ್ಸಿಲ್ ಪೊಲೀಸರಿಗೆ ಪತ್ರ ಬರೆದು, ತನಿಖೆ ನಡೆಸುವಂತೆ ಕೋರಿತ್ತು.  ಬಿಹಾರ ವಿವಿ ಇದು ನಕಲಿ ಪ್ರಮಾಣ ಪತ್ರ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com