ಮುಂಬೈ ಸಮೀಪ ಚಂಡಮಾರುತ: ಭಾರಿ ಮಳೆ ಸಾಧ್ಯತೆ

ಮುಂಬೈ ಬಳಿ ಭಾರಿ ಚಂಡಮಾರುತ ಕಾಣಿಸಿಕೊಂಡಿದ್ದು, ಇದರ ಪ್ರಭಾವದಿಂದ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬೈ ಬಳಿ ಭಾರಿ ಚಂಡಮಾರುತ ಕಾಣಿಸಿಕೊಂಡಿದ್ದು, ಇದರ ಪ್ರಭಾವದಿಂದ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಶೋಬಾ ಎಂಬ ಹೆಸರಿನ ಈ ಚಂಡ ಮಾರುತ ಮಂಬೈ ನಿಂದ 570 ಕಿಮೀ ದೂರದಲ್ಲಿ ಕಾಣಿಸಿ ಕೊಂಡಿದ್ದು, ಇದು ದಿನ ಕಳೆದಂತೆ ಹೆಚ್ಚು ತೀವ್ರ ವಾಗುತ್ತಿದೆ.

ಇದರ ಪರಿಣಾಮ ಈಗಾಗಲೇ ಮಂಗಳೂರಿನಲ್ಲಿ 8 ಸೆಂ.ಮೀ ಮಳೆಯಾಗಿದ್ದು, ಅದೇ ರೀತಿ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯಲಿದೆ. ಮಂಗಳೂರು, ಉಡುಪಿಯಲ್ಲಿ ತಲಾ 8 ಸೆಂ.ಮೀ ಮಳೆಯಾಗಿದ್ದರೆ, ಉಡುಪಿಯಲ್ಲಿ ತಲಾ 8ಸೆ.ಮೀ. ಮಳೆಯಾಗಿದ್ದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ತಲಾ 6 ಸೆ.ಮೀ ಮಳೆಯಾಗಿದೆ.

ಈ ಮಧ್ಯೆ ನಿಧಾನಗತಿಯಲ್ಲಿ ಆಗಮಿ ಸುತ್ತಿರುವ ಮುಂಗಾರು ಕೇರಳ ರಾಜ್ಯವನ್ನು ಸಂಪೂರ್ಣ ಆವರಿಸಿದ್ದು, ಕರಾವಳಿಯನ್ನು ಬಹುತೇಕ ಸುತ್ತುವರಿದಿದೆ. ಇದರೊಂದಿಗೆ ಮೈಸೂರು, ಮಂಡ್ಯ ಸುತ್ತಮುತ್ತ ಸಾಧಾರಣ ಮಳೆ ತರುವ ಮೂಲಕ ಮುಂಗಾರು ರಾಜ್ಯದಲ್ಲಿ ತನ್ನ ಪ್ರಭಾವನ್ನು ವಿಸ್ತರಿಸುತ್ತಿದೆ ಎಂದು ಹವಾಮಾನ ಇಲಾಖೆಯ ಪ್ರಭಾರ ನಿರ್ದೇಶಕ ಸುಂದರ್ ಎಂ.ಮೇತ್ರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com