ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ವಯಸ್ಕರ ಚಿತ್ರ ಚಿತ್ರೀಕರಣ!

ಅಮೆರಿಕಾದ ಪೋರ್ನ್ ಹಬ್ ವೆಬ್ ಸೈಟ್, ಮಾನವ ಇತಿಹಾಸದಲ್ಲೇ ಮೊದಲಬಾರಿಗೆ ಬಾಹ್ಯಾಕಾಶದಲ್ಲಿ ವಯಸ್ಕರ ಚಿತ್ರ ಚಿತ್ರೀಕರಿಸಲು ಯೋಜನೆ ರೂಪಿಸಿದೆ.
ಬಾಹ್ಯಾಕಾಶ(ಸಾಂದರ್ಭಿಕ ಚಿತ್ರ)
ಬಾಹ್ಯಾಕಾಶ(ಸಾಂದರ್ಭಿಕ ಚಿತ್ರ)

ನ್ಯೂಯಾರ್ಕ್: ಅಮೆರಿಕಾದ ಪೋರ್ನ್ ಹಬ್ ವೆಬ್ ಸೈಟ್, ಮಾನವ ಇತಿಹಾಸದಲ್ಲೇ ಮೊದಲಬಾರಿಗೆ ಬಾಹ್ಯಾಕಾಶದಲ್ಲಿ ವಯಸ್ಕರ ಚಿತ್ರ ಚಿತ್ರೀಕರಿಸಲು ಯೋಜನೆ ರೂಪಿಸಿದೆ.  2016 ರ ವೇಳೆಗೆ  ಈ ಯೋಜನೆ ಜಾರಿಗೆ ಬರಲಿದ್ದು, ಈ ಯೋಜನೆಗಾಗಿ  ಜನರಿಂದಲೇ 3  .4 ಮಿಲಿಯನ್ ಡಾಲರ್ ಹಣ ಸಂಗ್ರಹಿಸಲಾಗುತ್ತದೆ ಎಂದು ಪೋರ್ನ್ ಹಬ್ ವೆಬ್ ಸೈಟ್ ತಿಳಿಸಿದೆ. ಈ ವರೆಗೂ ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆದಿಲ್ಲ ಗುತ್ವಾಕರ್ಷಣೆ ಇಲ್ಲದ ಪ್ರದೇಶದಲ್ಲಿಯೂ ಲೈಂಗಿಕ ಕ್ರಿಯೆ ನಡೆಸುವುದು ಸಾಧ್ಯ ಎಂದು ತಿಳಿದಿರುವುದರಿಂದ ಅಮೆರಿಕಾದ ಸಂಸ್ಥೆ ಇಂಥದ್ದೊಂದು ಪ್ರಯೋಗ ನಡೆಸಲು ತೀರ್ಮಾನಿಸಿದೆ.

ಬಾಹ್ಯಾಕಾಶದಲ್ಲಿ  ಲೈಂಗಿಕತೆ  ಎಂಬ ವಿಷಯದ ಬಗ್ಗೆ  2006 ರಲ್ಲಿ ಸ್ಪೇಸ್ ಫ್ರಾಂಟಿಯರ್ ಫೌಂಡೇಷನ್ ಸಂಸ್ಥೆ ವಿಚಾರ ಸಂಕಿರಣ ಆಯೋಜಿಸಿತ್ತು. ಇದರಲ್ಲಿ ನಾಸಾ ವಿಜ್ಞಾನಿಗಳು ಭಾಗವಹಿಸಿ ಮನುಷ್ಯನ  ಬಾಹ್ಯಾಕಾಶದಲ್ಲಿ , ಜೈವಿಕ, ಭಾವನಾತ್ಮಕ, ದೈಹಿಕ ವಿಷಯಗಳ ಬಗ್ಗೆ ಮಾತಾಡಿದ್ದರು. ವಿಜ್ಞಾನ ಮತ್ತು ಲೈಂಗಿಕತೆಗಾಗಿಯೇ  ಈ ಯೋಜನೆಯನ್ನು  ರೂಪಿಸಲಾಗಿದೆ ಎಂದು ಪೋರ್ನ್ ಹಬ್  ವೆಬ್ ಸೈಟ್ ತಿಳಿಸಿದೆ. ಅಲ್ಲದೇ ಶೂನ್ಯ ಗುರುತ್ವಾಕರ್ಷಣೆಯಲ್ಲಿ  ದೃಶ್ಯಗಳನ್ನು ಸೆರೆಹಿಡಿಯುವ ಬಗ್ಗೆ ಕುತೂಹಲ ಮೂಡಿದೆ ಎಂದು ವೆಬ್ ಸೈಟ್ ತಿಳಿಸಿದೆ.  

ಬಾಹ್ಯಾಕಾಶದಲ್ಲಿ ವಯಸ್ಕರ ಚಿತ್ರ  ನಿರ್ಮಿಸಲು ಫಂಡ್ ಮಾಡುವವರಿಗೆ ಶ್ರೇಣೀಕೃತ ರಿವಾರ್ಡ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪೋರ್ನ್ ನಟಿ ಇವಾ ಲೋವಿಯ ಮತ್ತು ಜಾನಿ ಸಿನ್ಸ್  ವಯಸ್ಕರ ಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಬಾಹ್ಯಾಕಾಶದಲ್ಲಿ ಚಿತ್ರೀಕರಣವಾಗಲಿರುವುದರಿಂದ ಇವಾ ಲೋವಿಯ ಮತ್ತು ಜಾನಿ ಸಿನ್ಸ್ ಗೆ 6 ತಿಂಗಳ  ಕಾಲ ಕಠಿಣ ತರಬೇತಿ ನೀಡಲಾಗುತ್ತದೆ ಎಂದು ವೆಬ್ ಸೈಟ್ ತಿಳಿಸಿದೆ. ಕಾಲಾನುಕ್ರಮದಲ್ಲಿ ಮಾನವ ಜೀವನದ ಮುಖ್ಯ ಭಾಗ ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು  ಅಧ್ಯನ ಮಾಡಲು ಈ ಯೋಜನೆ ಪೂರಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com