ಜಗತ್ತಿನ 'ಅತೀ ಕಪ್ಪು ಮಗು' ನಿಜವೋ ಸುಳ್ಳೋ?

ಜಗತ್ತಿನ 'ಅತೀ ಕಪ್ಪುಮಗು' ಎಂದು ದಕ್ಷಿಣ ಆಫ್ರಿಕಾದ ಮಗುವಿನ ಫೋಟೋವೊಂದು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ.
ಜಗತ್ತಿನ ಅತೀ ಕಪ್ಪು ಮಗು
ಜಗತ್ತಿನ ಅತೀ ಕಪ್ಪು ಮಗು

ನವದೆಹಲಿ: ಜಗತ್ತಿನ 'ಅತೀ ಕಪ್ಪುಮಗು' ಎಂದು ದಕ್ಷಿಣ ಆಫ್ರಿಕಾದ ಮಗುವಿನ ಫೋಟೋವೊಂದು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ.

ಅತೀ ಕಪ್ಪು ತ್ವಚೆ ಹೊಂದಿರುವ ಮಗು ಇದಾಗಿದ್ದು, ಜಗತ್ತಿನಲ್ಲಿ ಇಷ್ಟರವರೆಗೆ ಇಷ್ಟೊಂದು ಕಪ್ಪಾಗಿರುವ ಮಗು ಹುಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಹೊಳೆಯುವ ಕಣ್ಣುಗಳ ಕಪ್ಪು ಕಪ್ಪಾಗಿರುವ ಈ ಮಗುವಿನ ಫೋಟೋ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಇದು ನಿಜವಾದ ಫೋಟೋ ಅಥವಾ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ಇಷ್ಟೊಂದು ಕರ್ರಗೆ ತ್ವಚೆಯಿರುವ ಮಗು ಹುಟ್ಟಲು ಸಾಧ್ಯವೆ? ಎಂಬುದು ಕೆಲವು ನೆಟಿಜನ್‌ಗಳ ಪ್ರಶ್ನೆಯಾದರೆ, ಇದು ಫೋಟೋಶಾಪ್ ಚಮತ್ಕಾರ ಎಂದು ಕೆಲವರು ವಾದಿಸಿದ್ದಾರೆ.

ಆದಾಗ್ಯೂ, ಹೀಗೊಂದು ಪಾಪು ಇರುವುದು ನಿಜವೆ? ಅಥವಾ ಇದು ಪಾಪುವನ್ನು ಹೋಲುವ ಬೊಂಬೆಯೇ? ಎಂಬುದರ ಬಗ್ಗೆಯೂ ಸಾಮಾಜಿಕ ತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com