ನಿವೃತ್ತಯೋಧರಿಗೆ ಶೀಘ್ರ ಸಿಹಿಸುದ್ದಿ

ನಿವೃತ್ತ ಯೋಧರ ಸರಣಿ ಉಪವಾಸ ಸತ್ಯಾಗ್ರಹ ಮೊದಲ ದಿನವೇ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದಂತಿದೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ನಡೆಯಲಿ ರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ `ಸಮಾನ ಹುದ್ದೆ ಸಮಾನ ಪಿಂಚಣಿ' ಯೋಜನೆಗೆ...
ನಿವೃತ್ತ ಯೋಧರು ಪ್ರತಿಭಟನೆಯಲ್ಲಿ ನಿರತರಾಗಿರುವ ಚಿತ್ರ
ನಿವೃತ್ತ ಯೋಧರು ಪ್ರತಿಭಟನೆಯಲ್ಲಿ ನಿರತರಾಗಿರುವ ಚಿತ್ರ

ನವದೆಹಲಿ: ನಿವೃತ್ತ ಯೋಧರ ಸರಣಿ ಉಪವಾಸ ಸತ್ಯಾಗ್ರಹ ಮೊದಲ ದಿನವೇ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದಂತಿದೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ನಡೆಯಲಿ ರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ `ಸಮಾನ ಹುದ್ದೆ ಸಮಾನ ಪಿಂಚಣಿ' ಯೋಜನೆಗೆ ಅಂಕಿತ ಬೀಳುವುದು ಬಹುತೇಕ ಖಚಿತ. ಕೇಂದ್ರ ಸರ್ಕಾರ ಈಗಾಗಲೇ ಈ ಯೋಜನೆಯನ್ನು ಜಾರಿಗೆ ತರಲು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಇದು ಘೋಷಣೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯೋಜನೆಗೆ ಕಾನೂನು ತೊಡಕುಗಳು ಉದ್ಭವಿಸದಂತೆ, ಯೋಧರಿಗೆ ಮೀಸಲಿರುವ ಈ ಯೋಜನೆಗೆ ಇತರೆ ಸರ್ಕಾರಿ ಉದ್ಯೋಗಿಗಳಿಂದಲೂ ಬೇಡಿಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯ ಇರುವುದರಿಂದ, ಅದಕ್ಕೆ ತಕ್ಕ ನಿಯಮಾವಳಿಗಳು ಸಿದ್ಧಗೊಳ್ಳುತ್ತಿದ್ದು ಬಿಹಾರ ಚುನಾವಣೆಗೆ ಮುನ್ನ ನಿವೃತ್ತ ಸೈನಿಕರಿಗೆ ಸಿಹಿ ಸುದ್ದಿ ದೊರೆಯುವ ಸೂಚನೆ ದೊರೆತಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಬೃಹತ್ ರ್ಯಾಲಿ ನಡೆಸಲು ನಿವೃತ್ತಯೋಧರು ನಿರ್ಧರಿಸಿರುವ ಹಿನ್ನೆಲೆಯಯೇ ಈ ಸುದ್ದಿ ಬಂದಿದೆಯಾದರೂ, ರ್ಯಾಲಿ ಹಿಂಪಡೆಯುವ ಬಗ್ಗೆ ಮಾಹಿತಿಗಳೇನೂ ಹೊರಬಂದಿಲ್ಲ.

ಏತನ್ಮಧ್ಯೆ, ಸಮಾನ ಹುದ್ಧೆ ಸಮಾನ ಪಿಂಚಣಿ ಯೋಜನೆಯ ಕಡತಗಳು ಈಗಾಗಲೇ ಆರ್ಥಿಕ ಸಚಿವರ ಬಳಿ ಬಂದಿದ್ದು ಅಂತಿಮ ಹಂತದ ಅನುಮೋದನೆ ಬಾಕಿ ಇದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಆರ್ಥಿಕ ಲೆಕ್ಕಾಚಾರ ಸಮಾನ ಹುದ್ದೆ ಸಮಾನ ಪಿಂಚಣಿ ಯೋಜನೆಯ ಅನುಷ್ಠಾನಕ್ಕಾಗಿ ರಕ್ಷಣಾ ಹಾಗೂ ಆರ್ಥಿಕ ಸಚಿವಾಲಯಗಳು
ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯೋಜನೆಯ ಪ್ರಕಾರ, ನಿವೃತ್ತ ಯೋಧರಿಗೆ ನೀಡಬೇಕಿರುವ ಪಿಂಚಣಿ ಹಣ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುವುದರಿಂದ, ಮೀಸಲು ನಿಧಿಯ ಬಗ್ಗೆ ಸ್ಪಷ್ಟತೆ ಅತ್ಯಗತ್ಯ ಎಂದು ಆರ್ಥಿಕ ಸಚಿವಾಲಯದ ಮೂಲಗಳು ತಿಳಿಸಿವೆ.

ಜಾರಿಯಾಗುತ್ತಿದ್ದಂತೆಯೇ ಬಾಕಿ ಪಿಂಚಣಿಮೊತ್ತ ಸೇರಿದಂತೆ ನಿವೃತ್ತ ಯೋಧರಿಗೆ ಒಟ್ಟು ರು.8,299 ಕೋಟಿ ಹಾಗೂ ಆಫೀಸರ್ ಹುದ್ದೆಗಿಂತ ಕೆಳ ವರ್ಗದ ಅಧಿಕಾರಿಗಳಿಗೆ ರು.7,100ಕೋಟಿ ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com