ಶಂಕರ್ ಸಿನ್ಹ ವಘೇಲ
ದೇಶ
ವಘೇಲ ವಿರುದ್ಧ ಎಫ್ ಐಆರ್
ಭೂ ಹಗರಣವೊಂದರ ಸಂಬಂಧದಲ್ಲಿ ವಿವಾದಕ್ಕೆ ಸಿಲುಕಿರುವ ಕೇಂದ್ರ ಮಾಜಿ ಸಚಿವ ಶಂಕರ್ ಸಿನ್ಹ ವಘೇಲ ವಿರುದ್ಧ ಸಿಬಿಐ ಮಂಗಳವಾರದಂದು ...
ನವದೆಹಲಿ: ಭೂ ಹಗರಣವೊಂದರ ಸಂಬಂಧದಲ್ಲಿ ವಿವಾದಕ್ಕೆ ಸಿಲುಕಿರುವ ಕೇಂದ್ರ ಮಾಜಿ ಸಚಿವ ಶಂಕರ್ ಸಿನ್ಹ ವಘೇಲ ವಿರುದ್ಧ ಸಿಬಿಐ ಮಂಗಳವಾರದಂದು ಎಫ್ ಐಆರ್ ದಾಖಲು ಮಾಡಿದೆ. ಕೇಂದ್ರ ಜವಳಿ ಖಾತೆಯ ಸಚಿವರಾಗಿದ್ದ ಸಮಯದಲ್ಲಿ ವಘೇಲ ಮುಂಬೈ ನ ಪ್ರಮುಖ ಭಾಗವೊಂದರಲ್ಲಿರುವ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಖಾಸಗಿ ಕಂಪನಿಯೊಂದಕ್ಕೆ ಮಾರಿದ್ದರು ಎಂಬುದು ಅವರ ಮೇಲಿದ್ದ ಆರೋಪ, ವಘೇಲ ಜೊತೆಗೆ ರಾಷ್ಟ್ರೀಯ ಜವಳಿ ನಿಗಮದ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ್ ನಿರ್ದೇಶಕ ರಾಮಚಂದ್ರನ್ ಪಿಳ್ಳೈ ಹಾಗೂ ಇತರೆ ಆರು ಮಂದಿಯ ವಿರುದ್ಧವೂ ಸಿಬಿಐ ಎಫ್ ಐಆರ್ ದಾಖಲಿಸಿದೆ. ಎಫ್ಐಆರ್ ದಾಖಲಿಸಿದ ಕೂಡಲೆ ಸಿಬಿಐ ತನ್ನ ದಾಳಿ ಆರಂಭಿಸಿದೆ. ವಘೇಲ ಮತ್ತು ಸಹಚರರ ಮನೆ, ನವದೆಹಲಿ, ಗಾಂಧಿನಗರ, ಗಾಂಧಿನಗರ, ಮುಂಬೈ ಮತ್ತು ಕೊಲ್ಕತದಲ್ಲಿ ತನ ಶೋಧ ನಡೆಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ