ಆಫ್ರಿಕಾ-ಅಮೆರಿಕ ಐತಿಹಾಸಿಕ ಚರ್ಚ್ ಮೇಲೆ ದಾಳಿ: 9 ಸಾವು

ಆಫ್ರಿಕಾ-ಅಮೆರಿಕಾದ ಐತಿಹಾಸಿಕ ಚರ್ಚ್ ಎಂದೇ ಖ್ಯಾತಿಗಳಿಸಿರುವ ದಕ್ಷಿಣ ಕೊರೆಲಿನಾ ಚರ್ಚ್ ಮೇಲೆ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ...
ಉಗ್ರರು ದಾಳಿ ನಡೆಸಿದ ದಕ್ಷಿಣ ಕೊರೆಲಿನಾ ಚರ್ಚ್ ಹೊರಾಂಗಣದಲ್ಲಿ ನಿಂತಿರುವ ಪೊಲೀಸರು
ಉಗ್ರರು ದಾಳಿ ನಡೆಸಿದ ದಕ್ಷಿಣ ಕೊರೆಲಿನಾ ಚರ್ಚ್ ಹೊರಾಂಗಣದಲ್ಲಿ ನಿಂತಿರುವ ಪೊಲೀಸರು

ವಾಷಿಂಗ್ಟನ್: ಆಫ್ರಿಕಾ-ಅಮೆರಿಕಾದ ಐತಿಹಾಸಿಕ ಚರ್ಚ್ ಎಂದೇ ಖ್ಯಾತಿಗಳಿಸಿರುವ ದಕ್ಷಿಣ ಕೊರೆಲಿನಾ ಚರ್ಚ್ ಮೇಲೆ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಅಪರಾಧ ವಿರೋಧಿ ನಗರ ಚಾರ್ಲ್ಸ್‌ಟನ್ ನ ದಕ್ಷಿಣ ಕೊರೆಲಿನಾ ಚರ್ಚ್ ಬಳಿ ನಿನ್ನೆ ರಾತ್ರಿ ಬಂದ ಉಗ್ರರು ಚರ್ಚ್ ಒಳಗಿದ ನುಗ್ಗಿದ್ದಾರೆ. ನಂತರ ನೆರೆದಿದ್ದವರ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರ ಪರಿಣಾಮ ಸ್ಥಳದಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಉಗ್ರರು ದಾಳಿ ನಡೆಸುವ ವೇಳೆ ಚರ್ಚ್ ಒಳಗೆ ಎಷ್ಟು ಮಂದಿ ಇದ್ದರು ಹಾಗೂ ಇದೀಗ ಎಷ್ಟು ಮಂದಿಯನ್ನು ಒತ್ತೆಯಾಳುಗಳಾಗಿದ್ದಾರೆ ಎಂಬುದರ ಕುರಿತಂತೆ ಈ ವರೆಗೂ ಮಾಹಿತಿ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಸಿರುವ ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಚರ್ಚ್ ಒಳಗೆ ವ್ಯಕ್ತಿಯೊಬ್ಬರು ಬಂದರು. ನಂತರ ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ದಿಗ್ಭ್ರಮರಾಗಿ ಎಲ್ಲರೂ ನಿಂತೇ ಇದ್ದೆವು. ಕಣ್ಣ ಮುಂದೆಯೇ ಇದ್ದ 8 ಮಂದಿ ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದರು. ಆ ಸಂದರ್ಭದಲ್ಲಿ ಏನಾ ಮಾಡಬೇಕೆಂದು ಯಾರಿಗೂ ತೋಚಲೇ ಇಲ್ಲ ಎಂದು ಉಗ್ರರಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com