ಇಲ್ಲಿ 50 ವರ್ಷದಲ್ಲಿ ಕಳ್ಳತನ ಆಗಿದ್ದು ಇದೇ ಮೊದಲು!

ಕ್ಯಾನಾ! ಅದು ಸ್ಕಾಟ್‍ಲೆಂಡ್ ಕರಾವಳಿಯ ಒಂದು ದ್ವೀಪಪ್ರದೇಶ. ಸದ್ಯಕ್ಕೆ ಒಂದು ವಿಚಿತ್ರ ಶಾಕ್‍ಗೆ ಈ ದ್ವೀಪ ಒಳಗಾಗಿದೆ. ಸುದ್ದಿ ಕೇಳಿದರೆ ನಿಮಗೂ ಅಚ್ಚರಿಯೆನಿಸುವುದು ಖಂಡಿತ. ಈ ದ್ವೀಪದೂರಿನಲ್ಲಿ ಕಳ್ಳತನ ನಡೆದಿದೆ ಅಂತಷ್ಟೇ ಅಂದರೆ ಇದರಲ್ಲೇನು ವಿಶೇಷ ಅನಿಸೀತೋ ಏನೋ...
ಇಲ್ಲಿ 50 ವರ್ಷದಲ್ಲಿ ಕಳ್ಳತನ ಆಗಿದ್ದು ಇದೇ ಮೊದಲು! (ಸಾಂದರ್ಭಿಕ ಚಿತ್ರ)
ಇಲ್ಲಿ 50 ವರ್ಷದಲ್ಲಿ ಕಳ್ಳತನ ಆಗಿದ್ದು ಇದೇ ಮೊದಲು! (ಸಾಂದರ್ಭಿಕ ಚಿತ್ರ)
Updated on

ಲಂಜನ್: ಕ್ಯಾನಾ! ಅದು ಸ್ಕಾಟ್‍ಲೆಂಡ್ ಕರಾವಳಿಯ ಒಂದು ದ್ವೀಪಪ್ರದೇಶ. ಸದ್ಯಕ್ಕೆ ಒಂದು ವಿಚಿತ್ರ ಶಾಕ್‍ಗೆ ಈ ದ್ವೀಪ ಒಳಗಾಗಿದೆ. ಸುದ್ದಿ ಕೇಳಿದರೆ ನಿಮಗೂ ಅಚ್ಚರಿಯೆನಿಸುವುದು ಖಂಡಿತ. ಈ ದ್ವೀಪದೂರಿನಲ್ಲಿ ಕಳ್ಳತನ ನಡೆದಿದೆ ಅಂತಷ್ಟೇ ಅಂದರೆ ಇದರಲ್ಲೇನು ವಿಶೇಷ ಅನಿಸೀತೋ ಏನೋ.

ಆದರೆ ಕಳೆದ ಐವತ್ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಈ ದ್ವೀಪದಲ್ಲಿ ಕಳ್ಳತನ ನಡೆದಿದೆ ಎಂಬುದು ಗಮನಿಸಬೇಕಾದ ಅಂಶ. 54 ವರ್ಷಗಳಿಂದ ಇಲ್ಲಿ ಕಳ್ಳತನವೇ ಆಗಿರಲಿಲ್ಲ ಎಂಬುದು ವಿಸ್ಮಯದ ಸಂಗತಿಯಾದರೆ, ಬರೀ 26 ಮಂದಿ ಇರುವ ದ್ವೀಪದಲ್ಲಿ ಕಳ್ಳತನ ನಡೆದಿದ್ದಾರೂ ಹೇಗೆ ಎಂಬುದು ಅದಕ್ಕಿಂತ ವಿಸ್ಮಯಕಾರಿ ಸಂಗತಿ! 1960ರಲ್ಲಿ ಮರದ ತಟ್ಟೆಯೊಂದು ಕಳವಾಗಿದ್ದು ಹೊರತುಪಡಿಸಿದರೆ, ಈ ವರೆಗೆ ಇಂಥ ಘಟನೆ ನಡೆದೇ ಇರಲಿಲ್ಲ.

ನಂಬಿಕೆ ವಿಶ್ವಾಸಗಳ ಮೇಲೆ ನಡೆಯುತ್ತಿರುವ ಈ ದ್ವೀಪದ ಜನಜೀವನ ಕಳ್ಳತನದ ಘಟನೆಯಿಂದಾಗಿ ಶಾಕ್‍ಗೆ ಒಳಗಾಗಿದೆ. ಇಷ್ಟಕ್ಕೂ ಕದ್ದದ್ದಾದರೂ ಏನು ನೋಡಿ. ಅಲ್ಲೊಂದು 24x7 ಕಾರ್ಯ ನಿರ್ವಹಿಸುವ ಜನರಲ್ ಸ್ಟೋರ್ ಇದೆ. ಇಡೀ ದ್ವೀಪಕ್ಕೆ ಇರೋದು ಅದೊಂದೇ ಅಂಗಡಿ. ಅಲ್ಲಿಂದ ಕಳ್ಳರು ಚಾಕೊಲೆಟ್, ಕಾಫಿ, ಬಿಸ್ಕೆಟ್, ಬ್ಯಾಟರಿ, ಸ್ವೀಟು, ಶೌಚಾಲಯ ಸಂಬಂ„ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಈ ಊರಿಗೆ ಪೊಲೀಸ್ ಸ್ಟೇಷನ್ ಬಿಡಿ, ಒಬ್ಬ ಪೊಲೀಸ್ ಪೇದೆಯೂ ಇಲ್ಲ. ದ್ವೀಪದಲ್ಲಿರುವ ಏಕ ಮಾತ್ರ ಅಂಗಡಿ ಸದಾ ತೆರೆದೇ ಇರುತ್ತದೆ. ಅಲ್ಲಿಗೆ ಬರುವ ಗ್ರಾಹಕರು ತಮಗೆ ಬೇಕಿರೋ ವಸ್ತು ತೆಗೆದುಕೊಂಡು ಅಲ್ಲಿರುವ ಹಾನೆಸ್ಟಿ ಡಬ್ಬದಲ್ಲಿ ದುಡ್ಡು ಹಾಕಿ ಹೋದರಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com