ಯೋಗ ದಿನದಂದೇ ಯೋಗ ಮಾಡಿ ಸಾವನ್ನಪ್ಪಿದ ವೈದ್ಯ

ಅಂತರಾಷ್ಟ್ರೀಯ ದಿನದ ಅಂಗವಾಗಿ ಯೋಗ ಮಾಡಲೆಂದು ಹೋಗಿದ್ದ ಆಯುರ್ವೇದ ವೈದ್ಯರು ಯೋಗ ಮಾಡುತ್ತಿರುವಾಗಲೇ ಸಾವನ್ನಪ್ಪಿರುವ ಘಟನೆಯೊಂದು ಹೈದರಾಬಾದ್ ನ ವನಸ್ಥಳಿಪುರಂನ ಪೊಲೀಸ್ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ...
ಯೋಗ ದಿನದಂದೇ ಯೋಗ ಮಾಡಿ ಸಾವನ್ನಪ್ಪಿದ ವೈದ್ಯ (ಸಾಂದರ್ಭಿಕ ಚಿತ್ರ)
ಯೋಗ ದಿನದಂದೇ ಯೋಗ ಮಾಡಿ ಸಾವನ್ನಪ್ಪಿದ ವೈದ್ಯ (ಸಾಂದರ್ಭಿಕ ಚಿತ್ರ)

ಹೈದರಾಬಾದ್: ಅಂತರಾಷ್ಟ್ರೀಯ ದಿನದ ಅಂಗವಾಗಿ ಯೋಗ ಮಾಡಲೆಂದು ಹೋಗಿದ್ದ ಆಯುರ್ವೇದ ವೈದ್ಯರು ಯೋಗ ಮಾಡುತ್ತಿರುವಾಗಲೇ ಸಾವನ್ನಪ್ಪಿರುವ ಘಟನೆಯೊಂದು ಹೈದರಾಬಾದ್ ನ ವನಸ್ಥಳಿಪುರಂನ ಪೊಲೀಸ್ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಮೃತ ವೈದ್ಯ ನಿವೃತ್ತ ಆಯುರ್ವೇದ ತಜ್ಞರಾಗಿದ್ದು, ಚೆನ್ನಾ ವೀರರೆಡ್ಡಿ (61) ಎಂದು ಗುರ್ತಿಸಲಾಗಿದೆ. ಅಂತರಾಷ್ಟ್ರೀಯ ದಿನದ ಅಂಗವಾಗಿ ಸಹರಾ ಎಸ್ಟೇಟ್ ನಲ್ಲಿ ಯೋಗದಿನವನ್ನು ಆಯೋಜಿಸಲಾಗಿತ್ತು. ಇದರಂತೆ ಸುತ್ತಮುತ್ತಲಿನ 100 ಮನೆಯ ನಿವಾಸಿಗಳು ಹಾಗೂ ನಿವೃತ್ತ ವೈದ್ಯರು ಪಾಲ್ಗೊಂಡಿದ್ದರು.

ಯೋಗ ಮಾಡಲೆಂದು ಬಂದ ಚೆನ್ನಾ ವೀರರೆಡ್ಡಿ ಅವರು, ಇದ್ದಕ್ಕಿದ್ದಂತೆ ಎದೆ ನೋವು ಎಂದು ಹೇಳಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಇವರನ್ನು ಕಂಡ ಸ್ಥಳದಲ್ಲಿದ್ದ ನಿವಾಸಿಗಳು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಿ ವೀರರೆಡ್ಡಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾಯುವುದಕ್ಕೂ ಮುನ್ನ ವೀರರೆಡ್ಡಿ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಅವರು ಎಂದಿನಂತೆಯೇ ತಯಾರಾಗಿ ಹೊರಹೋಗಿದ್ದರು ಎಂದು ವೀರರೆಡ್ಡಿ ಅವರ ಕುಟುಂಬಸ್ಥರು ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್.ದೇವೇಂದರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com