ಆಗಸ್ಟಾ ವೆಸ್ಟ್‍ಲ್ಯಾಂಡ್ ಕೇಸು ಮುಕ್ತಾಯಕ್ಕೆ ಸಿಬಿಐ ಚಿಂತನೆ?

ಯುಪಿಎ ಸರ್ಕಾರದ ಅವಧಿಯಲ್ಲಿ ಅತಿಗಣ್ಯರ ಹಾರಾಟಕ್ಕಾಗಿ ಖರೀದಿಸಲು ಉದ್ದೇಶಿಸಿದ್ದ ಹೆಲಿಕಾಪ್ಟರ್ ಖರೀದಿ ನಿಟ್ಟಿನಲ್ಲಿ ಲಂಚ ನೀಡಲಾಗಿದೆ...
ಆಗಸ್ಟಾ ವೆಸ್ಟ್ ಲ್ಯಾಂಡ್
ಆಗಸ್ಟಾ ವೆಸ್ಟ್ ಲ್ಯಾಂಡ್

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಅತಿಗಣ್ಯರ ಹಾರಾಟಕ್ಕಾಗಿ ಖರೀದಿಸಲು ಉದ್ದೇಶಿಸಿದ್ದ ಹೆಲಿಕಾಪ್ಟರ್ ಖರೀದಿ ನಿಟ್ಟಿನಲ್ಲಿ ಲಂಚ ನೀಡಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ತನಿಖೆಯನ್ನು ಮುಕ್ತಾಯಗೊಳಿಸಲು ಸಿಬಿಐ ಮುಂದಾಗಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ `ಮೈಲ್ ಟುಡೇ' ವರದಿ ಮಾಡಿದೆ.


ಇದುವರೆಗಿನ ತನಿಖೆಯಲ್ಲಿ ಹಗರ ಣಕ್ಕೆ ಮುಖ್ಯ ಕಾರಣರು ಯಾರು ಎಂದು ಕಂಡುಕೊಳ್ಳಲು ಸಿಬಿಐಗೆ ಸಾಧ್ಯವಾಗಿಲ್ಲ. ಕಳೆದ ವರ್ಷವೇ ಹಗರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಇಟಲಿಯಲ್ಲಿ ಮುಕ್ತಾಯ ಘೋಷಿಸಲಾಗಿತ್ತು.

ದೇಶದಲ್ಲಿ ತನಿಖೆ ನಡೆಸುತ್ತಿದ್ದ ಸಿಬಿಐ ರು. 3,600 ಕೋಟಿ ಮೌಲ್ಯದ ಕಾಪ್ಟರ್ ಖರೀದಿ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪಗಳ ತನಿಖೆಗೆ ತಿಣುಕಾಡುತ್ತಿತ್ತು. ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಐಎಎಫ್ ನ ನಿವೃತ್ತ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಸ್.ಪಿ.ತ್ಯಾಗಿ ಮತ್ತು ಅವರ ಸಹೋದರರ ವಿರುದ್ಧ ಕೇಸು ದಾಖಲಾಗಿತ್ತು. ಇದರ ಜತೆಗೆ ಆಗಸ್ಟಾವೆಸ್ಟ್ ಲ್ಯಾಂಡ್‍ಗೆ ನೀಡಿದ್ದ ಮುಂಗಡ ಹಣ ರು. 1,800 ಕೋಟಿಯನ್ನು ಸರ್ಕಾರ ಈಗಾಗಲೇ ವಸೂಲು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com