
ನವದೆಹಲಿ: ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮಾರ್ ವಿರುದ್ಧದ ನಕಲಿ ಪದವಿ ಪ್ರಮಾಣ ಪತ್ರ ವಿವಾದದಲ್ಲಿ ಇದುವರೆಗೂ ಸುಮ್ಮನಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಮೌನ ಮುರಿದಿದ್ದಾರೆ.
ದೆಹಲಿ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿ ಸತ್ಯವಾದದ್ದು, ಇದುವರೆಗೂ ನಾನು ಕತ್ತಲೆಯಲ್ಲಿ ಮುಳುಗಿ ಹೋಗಿದ್ದೆ. ತೋಮಾರ್ ತೋರಿದ್ದ ದಾಖಲೆಗಳು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಸದನಕ್ಕೆ ವಿವರ ನೀಡಿದರು.
ನಕಲಿ ಪದವಿ ಪ್ರಮಾಣ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಒಂದು ವೇಳೆ ಜಿತೇಂದ್ರ ಸಿಂಗ್ ತೋಮಾರ್ ಅವರದ್ದು ತಪ್ಪು ಎಂದು ಸಾಬೀತಾದರೇ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಯಾವುದೇ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ಪಕ್ಷ ಹಾಗೂ ನಾನು ಸಹಿಸಲ್ಲ. ಯಾವುದೇ ಸಚಿವರೊಂದಿಗೆ ನನಗೆ ವಯಕ್ತಿಕ ಸಂಬಂಧವಿಲ್ಲ. ಹೀಗಾಗಿಯೇ ತೋಮಾರ್ ರಾಜೀನಾಮೆ ಅಂಗೀಕರಿಸಿದ್ದಾಗಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
Advertisement